ಗೋಕಾಕ:ಯುವ ಜನಾಂಗ ಕಲೆ ಸಾಹಿತ್ಯದ ಗೀಳು ಬೆಳಸಿಕೊಂಡು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು : ಜಯಾನಂದ
ಯುವ ಜನಾಂಗ ಕಲೆ ಸಾಹಿತ್ಯದ ಗೀಳು ಬೆಳಸಿಕೊಂಡು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು : ಜಯಾನಂದ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 21 –
ಹಳ್ಳಿಗಾಡಿನ ಕಲೆಯ ಪ್ರತಿಭೆಗಳು ಕಾಡಿನೊಳಗಿನ ಹೂವಿನಂತೆ ಕಮರುವುದು ಬೇಡ ಅವುಗಳನ್ನು ಗುರುತಿಸುವ ಕಾರ್ಯ ವಿದ್ವಾಂಸರಿಂದ ಆಗಬೇಕಾಗಿದೆ ಎಂದು ಕರ್ನಾಟಕ ಲಲಿತಕಲಾ ಅಕ್ಯಾಡಮಿ ಸದಸ್ಯ ಜಯಾನಂದ ಮಾದರ ಹೇಳಿದರು.
ಅವರು ಸಮೀಪದ ತಳಕಟನಾಳದಲ್ಲಿ ಗೋಕಾಕದ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದ ವಿಶೇಷ ಪರಿಣಿತಿ ನಾಲ್ಕನೇ ವರ್ಷದ ಚಿತ್ರಕಲಾ ವಿದ್ಯಾರ್ಥಿ ಹಣಮಂತ ಪರಪ್ಪ ಗಂಗಣಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು ಯುವ ಜನಾಂಗ ಕಲೆ ಸಾಹಿತ್ಯದ ಗೀಳು ಬೆಳಸಿಕೊಂಡು ಮುಂದಿನ ಪೀಳಿಗೆಗೆ ಮಾದರಿಯಾಗುವ ಕಾರ್ಯ ಮಾಡಬೇಕೆಂದು ಕಿವಿಮಾತು ಹೇಳಿದರು.
ಮಕ್ಕಳ ಸಾಹಿತಿ ಲಕ್ಷ್ಮಣ ಚೌರಿ ಪ್ರದರ್ಶನ ಉದ್ಘಾಟಿಸಿ ಕಲೆ ಹಾಗೂ ಕಲಾವಿದರಿಂದ ದೇಶ ಉಜ್ವಲವಾಗಿ ಬೆಳೆಯಲು ಸಾದ್ಯವಿದೆ ಕಲಿಕಾ ಹಂತದಲ್ಲಿ ಜವಾಬ್ದಾರಿ ಅರಿತು ವಿದ್ಯೆಗಳಿಸಬೇಕಿದೆ ಎಂದು ಹೇಳಿದರು,ಊರಿನ ಹಿರಿಯ ಲಕ್ಷ್ಮಣಗೌಡ ಪಾಟೀಲ ಅಧ್ಯಕ್ಷತೆ ವಹಸಿದ್ದರು ಕಲಾವಿದರಾದ ಮಲ್ಲಮ್ಮ ದಳವಾಯಿ ಬಸವರಾಜ ದಾರೋಜಿಯವರನ್ನು ಸತ್ಕರಿಸಲಾಯಿತು ಊರ ಪ್ರಮುಖರಾದ ವಿರುಪಾಕ್ಷ ಮುಂಗರವಾಡಿ, ನಿಂಗಪ್ಪಾ ಗೋಟೂರ,ಹಣಮಂತ ನಾಯಕ, ಅಜ್ಜಪ್ಪಾ ಹುಲಕುಂದ, ಗ್ರಾ, ಪಂ, ಅಧ್ಯಕ್ಷ ಅಪ್ಪಾಸಾಬ ನಧಾಪ್, ಸದಸ್ಯರಾದ ದುರಗವ್ವಾ ಮಾದರ, ಅಜ್ಜಪ್ಪಾ ಹುಲಕುಂದ, ಕೆಂಪಣ್ಣಾ ಬೆಣ್ಣಿ, ರುದ್ರವ್ವಾ ಗಂಗಣಿ, ಸುಜಾತಾ ಅಜ್ಜನ್ನವರ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಕಲಾಪ್ರದರ್ಶನ ಜರುಗಿತು, ಯಲ್ಲಪ್ಪಾ ನಂದಿ ಸ್ವಾಗತಿಸಿದರು ಶಿಕ್ಷP ವಿಠ್ಠಲ ಕಣಿಲ್ಕಾರ ನಿರೂಪಿಸಿ ವಂದಿಸಿzರು.