ಗೋಕಾಕ:ನಗರಸಭೆ ಭೇಟಿ ನೀಡಿದ ಮಾಜಿ ಸಚಿವ ಸತೀಶ : ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ

ನಗರಸಭೆ ಭೇಟಿ ನೀಡಿದ ಮಾಜಿ ಸಚಿವ ಸತೀಶ : ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಆ 15 :
ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ಮಂಗಳವಾರದಂದು ಗೋಕಾಕ ನಗರಸಭೆಗೆ ಭೇಟಿ ನೀಡಿ ಸುದೀರ್ಘ ಒಂದೂವರೆ ಗಂಟೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು ಇಡೀ ನಗರದ ಜನತೆಯ ಗಮನ ಸೆಳೆಯಿತು.
ನಗರಸಭೆಯಲ್ಲಿ ಅವ್ಯವಹಾರಗಳು ಕುರಿತು ಇಲ್ಲಿಯ ಜನತೆ ಹಾಗೂ ನಗರಸಭೆ ಸದಸ್ಯರ ಆರೋಪಗಳ ಹಿನ್ನಲೆಯಲ್ಲಿ ಶಾಸಕ ಸತೀಶ ಜಾರಕಿಹೊಳಿ ಅವರು ನಗರಸಭೆಗೆ ಭೇಟಿ ನೀಡಿದ್ದರಿಂದ ನಗರದ ಜನತೆ ನಗರಸಭೆ ಆಡಳಿತದ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದರು.
ಕಳೆದ 5 ವರ್ಷಗಳಿಂದ ನಗರಸಭೆಯಿಂದ ಕೈಕೊಂಡ ಕಾಮಗಾರಿಗಳ ವಿವರ ಪಡೆದ ಅವರು ನಗರಸಭೆಯಿಂದ ನೀಡಿದ ವಿವರಗಳು ಸರಿ ಇರುವದರ ಬಗ್ಗೆ ತಳಮಟ್ಟದಲ್ಲಿ ತನಿಖೆ ನಡೆಸಿ ಪುನಃ ದಿ. 22ರಂದು ಅಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸುವದಾಗಿ ತಿಳಿಸಿದರು.
ಅಧಿಕಾರಿಗಳ ಸಭೆಯಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ನಗರಸಭೆಯಲ್ಲಿ ನಡೆದ ಹಲವಾರು ಹಗರಣಗಳನ್ನು ಶಾಸಕರ ಗಮನಕ್ಕೆ ಬಂದವು. ಅಧಿಕಾರಿಗಳ ಮುಂದೆಯೇ ನೂತನ ನಗರಸಭೆ ಸದಸ್ಯರು ನೇರವಾಗಿ ಹಗರಣಗಳ ಪ್ರಸ್ತಾಪ ಮಾಡಿದರು. ನಗರದಲ್ಲಿ ರಸ್ತೆ ದೀಪಗಳ ಅಳವಡಿಕೆಗಾಗಿ 3.60 ಲಕ್ಷ ರೂ. ಟೆಂಡರ ನೀಡಲಾಗಿದೆ. ಆದರೆ ಅದರಲ್ಲಿ ಒಂದು ಲಕ್ಷ ರೂ. ಪ್ರತಿ ತಿಂಗಳು ಗುತ್ತಿಗೆದಾರನಿಂದ ಪಡೆಯಲಾಗುತ್ತಿದೆ. ನಗರದ ಸ್ವಚ್ಛತೆಗಾಗಿ 71 ಪೌರ ಕಾರ್ಮಿಕರು ಇದ್ದು ಅವರಿಗೆ ನೀಡಲಾಗುತ್ತಿದ್ದ ಸಂಬಳದಲ್ಲಿ ಪ್ರತಿ ತಿಂಗಳು 1700ರೂ. ಕಟ್ ಮಾಡಿ ನೀಡಲಾಗುತ್ತಿದೆ. ಅಲ್ಲದೆ ನಗರಸಭೆ ವಾಹನಗಳ ಡಿಜಾಯಿಲ್‍ಗಾಗಿ 4 ಲಕ್ಷ ರೂ. ನೀಡಲಾಗುತ್ತಿದೆ. ಯುಜಿಡಿ ಕಾಮಗಾರಿ ಇನ್ನೂ ಪೂರ್ಣವೇ ಆಗದಿರುವಾಗ ‘ಮೆಂಟೆನೆನ್ಸ್’ ಎಂದು ಪ್ರತಿ ತಿಂಗಳು 1ಲಕ್ಷ 20 ಸಾವಿರ ಖರ್ಚು ಹಾಕಲಾಗುತ್ತಿದೆ. ಸದ್ಯ ನಗರದಲ್ಲಿ ನೀರಿನ ಕರ 15 ಲಕ್ಷ ರೂ. ವಸೂಲು ಆಗುತ್ತಿದ್ದು ಅದರಲ್ಲಿ 2 ಲಕ್ಷ ರೂ. ಯಾರಿಗೆ ಹೋಗುತ್ತಿದೆ ಎನ್ನುವದು ಸ್ಪಷ್ಟ ಪಡಿಸಲು ಆಗ್ರಹಿಸಲಾಯಿತು. ಈಗ 16 ಕೋಟಿ ರೂ. ವೆಚ್ಚದಲ್ಲಿ ಡಿವೈಎಸ್‍ಪಿ ಆಫೀಸದಿಂದ ನಾಕಾ ನಂ.1ವರೆಗಿನ ಡಬಲ್ ರಸ್ತೆಯಲ್ಲಿ ವಿದ್ಯುತ್ ದೀಪ ಅಳವಡಿಕೆಗಾಗಿ ಟೆಂಡರ ಕರೆಯಲು ತಯಾರಿ ನಡೆಸಿದ್ದು ಇದರಲ್ಲಿ ದೊಡ್ಡ ಪ್ರಮಾಣದ ಭೃಷ್ಟಾಚಾರ ನಡೆಯುವ ಸಾಧ್ಯತೆ ಇದೆಯೆಂದು ಸಂಶಯ ವ್ಯಕ್ತ ಪಡಿಸಲಾಯಿತು. ಲೋಕೋಪಯೋಗಿ ಇಲಾಖೆಗಾಗಿ ಪ್ರತ್ಯøಕವಾಗಿ ಅನುದಾನವಿದ್ದು ಅದನ್ನು ಮಾಡಿಸಲಾಗುವದು ಎಂದು ತಿಳಿಸಿದ ಸತೀಶ ಜಾರಕಿಹೊಳಿ ಅವರು 16 ಕೋಟಿ ರೂ. ನಗರದ ಅಭಿವೃದ್ಧಿಗೆ ಉಪಯೋಗಿಸಬೇಕೆಂದು ಸಲಹೆ ನೀಡಿದರು.
ಅಧಿಕಾರಿಗಳು ನೀಡಿದ ವಿವರದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ 400 ಮನೆಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ ಎಂದು ತಿಳಿಸಲಾಗಿದ್ದು ಅದೇರೀತಿ ಇತರ ಕೆಲಸಗಳ ವಿವರ ನೀಡಲಾಗಿದ್ದು ಅವುಗಳ ಪರಿಶೀಲನೆ ನಡೆಸಿ ಬರುವ ವಾರ ನಡೆಯುವ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ.
ಒಟ್ಟಾರೆಯಾಗಿ ಗೋಡೆ ತೊಳೆದಂತೆ ರಾಡಿ ಬರುವಂತೆ ನಗರಸಭೆಗಳ ಹಗರಣಗಳು ಬೆಳಕಿಗೆ ಬರುತ್ತಿವೆ ಎಂದು ಹೇಳಲಾಗುತ್ತಿದೆ.
—————————————————-
ಗೋಕಾಕ ಅ.15-ಕಳೆದ ಐದು ವರ್ಷಗಳ ಅವಧಿಯಲ್ಲಿ ನಗರಸಭೆಯಿಂದ ಮಾಡಲಾದ ಕಾಮಗಿರಿಗಳ ವಿವರವನ್ನು ಅಧಿಕಾರಿಗಳು ನೀಡಿದ್ದು ಅವುಗಳನ್ನು ಪರಿಶೀಲನೆ ನಡೆಸಿ ಪುನಃ ದಿ. 22ರಂದು ಅಧಿಕಾರಿಗಳ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಅವರು ತಿಳಿಸಿದರು.
ನರಸಭೆಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ ನಂತರ ಪತ್ರಕರ್ತರ ಜೊತೆ ಮಾತನಾಡುತ್ತಿದ್ದ ಅವರು ಎಸ್‍ಎಎಫ್/ನಗರೋತ್ಥಾನ, 14ನೇ ಹಣಕಾಸು ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ವಿವರ ಅಧಿಕಾರಿಗಳು ನೀಡಿದ್ದು, 24/7 ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲಾಗಿದ್ದು ನಗರದ ಎಲ್ಲಿಯೂ 24/7 ಕುಡಿಯುವ ನೀರಿನ ಪೂರೈಕೆ ಇರುವದಿಲ್ಲ. ಪ್ರತಿದಿನ ಒಂದೆರಡು ಗಂಟೆ ಮಾತ್ರ ನೀರಿನ ಪೂರೈಕೆ ಆಗುತ್ತಿಲ್ಲ. ಇದರಿಂದ ನೀರು ಪೂರೈಸುತ್ತಿದ್ದಾಗ ಗಾಳಿಯಿಂದ ಮೀಟರ ಸಿಕ್ಕಾಪಟ್ಟೆ ಓಡಿ ಹೆಚ್ಚಿನ ಬಿಲ್ ಬರುತ್ತಿದೆ. ಈ ಬಗ್ಗೆ ಕ್ರಮ ಕೈಕೊಳ್ಳುವಂತೆ ಜೈನ ಇರ್ರಿಗೇಶನ್ ಕಂಪನಿಗೆ ಸಲಹೆ ನಿಡಲಾಗಿದೆ. ಅದಕ್ಕೆ ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು. ಇಲಕಲ್ಲ ಹಾಗೂ ಹಳಿಯಾಳದಲ್ಲಿ 24/7 ಕುಡಿಯುವ ನೀರಿನ ಯೋಜನೆ ಯಾವ ರೀತಿಯಾಗಿ ಜಾರಿಗೊಳಿಸಲಾಗಿದೆ ಎನ್ನುವದನ್ನು ನಗರಸಭೆ ಅಧಿಕಾರಿಗಳು ಹೋಗಿ ಬರುವಂತೆಯೂ ಸತೀಶ ಜಾರಕಿಹೊಳಿ ಸಲಹೆ ನೀಡಿದರು.
ನಗರಸಭೆಯಲ್ಲಿ ಸದ್ಯ ನಾಲ್ವರ ಆಡಳಿತ ನಡೆದಿದ್ದು ಅದನ್ನು ತೊಡೆದು ಹಾಕಿ ನಗರದ ಪ್ರತಿಯೊಬ್ಬ ನಾಗರಿಕನ ಸಮಸ್ಯೆಗೆ ಸ್ಪಂದಿಸುವ ವ್ಯವಸ್ಥೆ ತರುವದೇ ತಮ್ಮ ಉದ್ದೇಶವಾಗಿದೆ ಎಂದು ಸ್ಪಷ್ಟ ಪಡಿಸಿದ ಸತೀಶ ಜಾರಕಿಹೊಳಿ ನಗರಸಭೆ ಕಂದಾಯ ವಿಭಾಗದ ಭೃಷ್ಟಾಚಾರದ ಬಗ್ಗೆಯೂ ಗಮನ ಹರಿಸುವದಾಗಿ ಹೇಳಿದರು.