RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಲಕ್ಷ್ಯಚಲನಚಿತ್ರದ ಧ್ವನಿ ಸುರುಳಿ ಬಿಡುಗಡೆ

ಗೋಕಾಕ:ಲಕ್ಷ್ಯಚಲನಚಿತ್ರದ ಧ್ವನಿ ಸುರುಳಿ ಬಿಡುಗಡೆ 

ಲಕ್ಷ್ಯ ಚಲನಚಿತ್ರದ ಧ್ವನಿ ಸುರುಳಿ ಬಿಡುಗಡೆ ಗೋಳಿಸುತ್ತಿರುವ ಗಣ್ಯರು

ಲಕ್ಷ್ಯಚಲನಚಿತ್ರದ ಧ್ವನಿ ಸುರುಳಿ ಬಿಡುಗಡೆ

 

 

ನಮ್ಮ ಬೆಳಗಾವಿ ಇ- ವಾರ್ತೆ, ಗೋಕಾಕ ಸೆ 28:

 

 

ನಗರದ ಗಣ್ಯ ವ್ಯಾಪಾರಸ್ಥ ಮಹಾಂತೇಶ ತಾಂವಶಿ ಅವರು ನಿರ್ಮಿಸುತ್ತಿರುವ ಕನ್ನಡ ಚಲನಚಿತ್ರ ಲಕ್ಷ್ಯ ನ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಶುಕ್ರವಾರದಂದು ಬೆಂಗಳೂರಿನಲ್ಲಿ ನೆರವೆರಿತು.
ಚಾಮರಾಜನಗರದ ಕಲಾವಿದರ ಸಂಘದ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಧ್ವನಿಸುರುಳಿ ಬಿಡುಗಡೆಗೋಳಿಸಿ ಮಾತನಾಡಿದ ಹಿರಿಯ ಕಲಾವಿದ ದೊಡ್ಡಣ್ಣ ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಏನ್ನೇಲ್ಲಾ ಸಾಧಿಸಲು ಸಾಧ್ಯ ಆ ದಿಸೆಯಲ್ಲಿ ಇಂದು ತಾಂವಶಿ ಅವರು ಸಾಧಿಸಿ ನಿರ್ಮಾಪಕರಾಗಿ ಚಿತ್ರರಂಗವನ್ನು ಪ್ರವೇಶಿಸಿದ್ದಾರೆ. ಇವರ ಸಾಧನೆ ಹೀಗೆಯೇ ಮುಂದವರೆದು ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳು ಚಿತ್ರರಂಗಕ್ಕೆ ಬರುವಂತದಾಗಲಿ ಎಂದು ಅಭಿಪ್ರಾಯಪಟ್ಟರು
ಈ ಸಂದರ್ಭದಲ್ಲಿ ಹಿರಿಯ ಕಲಾವಿದ ರಾಮಕೃಷ್ಣ, ಚಲನಚಿತ್ರ ಮಂಡಳಿಯ ಗೌರವ ಕಾರ್ಯದರ್ಶಿ ಭಾ.ಮಾ ಹರೀಶ,ಸಂಗೀತ ನಿರ್ದೇಶಕ ಜೆ.ಸಿ.ಗಿಪ್ಟ್ ಮತ್ತು ಜ್ಯೂವಿನ ಸಿಂಗ,ಕಲಾವಿದರಾದ ಸಂತೋಷರಾಜ,ನಿರ್ದೇಶಕ ರವಿ ಸಾಸನೂರ, ಝವಾರೆ,ಮಾಲತಿಶ್ರೀ,ಪ್ರಕಾಶ ಕೋಲಾರ, ಸೇರಿದಂತೆ ಇತರರು ಇದ್ದರು

Related posts: