RNI NO. KARKAN/2006/27779|Sunday, June 15, 2025
You are here: Home » breaking news » ಬೆಳಗಾವಿ:34 ಬಾಕ್ಸ್‌, ವಿವಿಧ ನಮೂನೆಯ ವಿಸ್ಕಿ ಸೇರಿದಂತೆ ₹ 3.49 ಲಕ್ಷ ಮೌಲ್ಯದ ಮದ್ಯ ವಶ

ಬೆಳಗಾವಿ:34 ಬಾಕ್ಸ್‌, ವಿವಿಧ ನಮೂನೆಯ ವಿಸ್ಕಿ ಸೇರಿದಂತೆ ₹ 3.49 ಲಕ್ಷ ಮೌಲ್ಯದ ಮದ್ಯ ವಶ 

34 ಬಾಕ್ಸ್‌, ವಿವಿಧ ನಮೂನೆಯ ವಿಸ್ಕಿ ಸೇರಿದಂತೆ ₹ 3.49 ಲಕ್ಷ ಮೌಲ್ಯದ ಮದ್ಯ ವಶ

ನಮ್ಮ ಬೆಳಗಾವಿ ಇ -ವಾರ್ತೆ , ಬೆಳಗಾವಿ ಸೆ 26 : 

ಹುಕ್ಕೇರಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಗೋವಾವೇಸ್ ಹೋಟೆಲ್ ಎದುರು ಗೂಡ್ಸ್‌ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹ 3.49 ಲಕ್ಷ ಮೌಲ್ಯದ 306 ಲೀಟರ್‌ (34 ಬಾಕ್ಸ್‌, ವಿವಿಧ ನಮೂನೆಯ ವಿಸ್ಕಿ) ಗೋವಾ ಮದ್ಯವನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆ ಸಾವಂತವಾಡಿಯ ವಿಶಾಲ ಜಯವಂತ ಕುಡತರಕರ (26) ಬಂಧಿತ. ಇವರು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಾಗಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದರು. ₹ 3 ಲಕ್ಷ ಮೌಲ್ಯದ ವಾಹನವನ್ನೂ ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಡಾ.ವೈ. ಮಂಜುನಾಥ, ಅಬಕಾರಿ ಉಪ ಆಯುಕ್ತ ಕೆಅರುಣಕುಮಾರ ಮಾರ್ಗದರ್ಶನದಲ್ಲಿ ಚಿಕ್ಕೋಡಿ ವಿಭಾಗದ ಅಬಕಾರಿ ಉಪ ಅಧೀಕ್ಷಕ ವಿಜಯಕುಮಾರ ಜೆ. ಹಿರೇಮಠ ನೇತೃತ್ವದಲ್ಲಿ ಅಬಕಾರಿ ಇನ್‌ಸ್ಪೆಕ್ಟರ್‌ ಬಸವರಾಜ ಕರಮಣ್ಣನವರ, ಸತೀಶ ಕಾಗಲೆ, ಪ್ರವೀಣ ರಂಗಸುಭೆ ಪಾಲ್ಗೊಂಡಿದ್ದರು.

Related posts: