RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ತಲೆಯ ಮೇಲೆ‌ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ : ಅರಬಾಂವಿಯಲ್ಲಿ ಘಟನೆ

ಗೋಕಾಕ:ತಲೆಯ ಮೇಲೆ‌ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ : ಅರಬಾಂವಿಯಲ್ಲಿ ಘಟನೆ 

ತಲೆಯ ಮೇಲೆ‌ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ : ಅರಬಾಂವಿಯಲ್ಲಿ ಘಟನೆ

ಗೋಕಾಕ ಅ 12 : ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಯುವಕನನ್ನು ಹತ್ಯೆಗೈದ ಘಟನೆ ಗೋಕಾಕ ತಾಲೂಕಿನ ಅರಭಾಂವಿ ಗ್ರಾಮದಲ್ಲಿ ನಡೆದಿದೆ

ರಾಮಪ್ಪ ಮಾರುತಿ ಬೆಳಗಲಿ (೧೯) ಕೊಲೆಯಾದ ಯುವಕ ಎಂದು ಗುರುತಿಸಲಾಗಿದ್ದು , ಅರಭಾವಿ ಬೆಟ್ಟದ ಬಯಲು ಪ್ರದೇಶದಲ್ಲಿ ಕಲ್ಲು ಎತ್ತಿ ಹಾಕಿ ಹತ್ಯೆಗೈಯಲಾಗಿದೆ . ಮೃತ ಯುವಕ ರಾಮಪ್ಪ ರಾಯಬಾಗದ ಸವಸುದ್ದಿ ಗ್ರಾಮದವನಾಗಿದ್ದು , ಬಬಲಾದಿ ಮಠಕ್ಕೆ ಸೇವೆಗೆಂದು ಬಂದಿದ್ದ ಎನ್ನಲಾಗಿದೆ
ಮುಂಜಾನೆ ಎಮ್ಮೆ ಮೇಯಿಸಲು ಬೆಟ್ಟಕ್ಕೆ ಹೋದಾಗ ಘಟನೆ ನಡೆದಿದೆ ಎಂದು ತಿಳಿದುಬಂದಿದೆ .
ಸ್ಥಳಕ್ಕೆ ಘಟಪ್ರಭಾ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ . ಈ ಕುರಿತು ಘಟಪ್ರಭಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Related posts: