RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಅಂಕಲಗಿ,ಕುಂದರಗಿ ಸೇರಿದಂತೆ ಸುತ್ತಮುತ್ತಲಿನ ನೆರೆ ಪೀಡಿತ ಪ್ರದೇಶಗಳಿಗೆ ಮಾಜಿ ಸಚಿವ ರಮೇಶ ಭೇಟಿ

ಗೋಕಾಕ:ಅಂಕಲಗಿ,ಕುಂದರಗಿ ಸೇರಿದಂತೆ ಸುತ್ತಮುತ್ತಲಿನ ನೆರೆ ಪೀಡಿತ ಪ್ರದೇಶಗಳಿಗೆ ಮಾಜಿ ಸಚಿವ ರಮೇಶ ಭೇಟಿ 

ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಬಳ್ಳಾರಿ ನಾಲಾದಿಂದ ಪ್ರವಾಹದಿಂದ ನಿರಾಶ್ರಿತರ ವಾಸವಾಗಿರುವ ಗಂಜಿ ಕೇಂದ್ರಗಳಿಗೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಭೇಟಿ ನೀಡುತ್ತಿರುವುದು.

ಅಂಕಲಗಿ,ಕುಂದರಗಿ ಸೇರಿದಂತೆ ಸುತ್ತಮುತ್ತಲಿನ ನೆರೆ ಪೀಡಿತ ಪ್ರದೇಶಗಳಿಗೆ ಮಾಜಿ ಸಚಿವ ರಮೇಶ ಭೇಟಿ

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 12 :

 

 

ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಬಳ್ಳಾರಿ ನಾಲಾದ ಪ್ರವಾಹದಿಂದ ನಿರಾಶ್ರಿತರ ವಾಸವಾಗಿರುವ ಗಂಜಿ ಕೇಂದ್ರಗಳಿಗೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಸೋಮವಾರದಂದು ಭೇಟಿ ನೀಡಿ ಅಲ್ಲಿಯ ಸಂತ್ರಸ್ತರಿಗೆ ಸ್ವಾಂತನ ಹೇಳಿದರು.
ನಂತರ ಕುಂದರಗಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿದರು. ಸಂತ್ರಸ್ತರಿಂದ ಅಹವಾಲಗಳನ್ನು ಸ್ವೀಕರಿಸಿ ಶೀಘ್ರದಲ್ಲಿ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಸಂತ್ರಸ್ತರಿಗೆ ಭರವಸೆಯನ್ನು ನೀಡಿದರು.
ಇದಕ್ಕೂ ಮುನ್ನ ಪ್ರವಾಹದಲ್ಲಿ ಇಳಿಮುಖವಾಗಿದ್ದರಿಂದ ಗೋಕಾಕ ನಗರದ ಮಾರ್ಕಂಡೇಯ ನದಿಯ ಪ್ರವಾಹದಲ್ಲಿ ಮುಳುಗಿದ್ದ ಚಿಕ್ಕೋಳಿ ಸೇತುವೆಯನ್ನು ಅಧಿಕಾರಿಗಳೊಂದಿಗೆ ವೀಕ್ಷಣೆ ನಡೆಸಿ ಸಂಚಾರ ಯೋಗ್ಯವಾಗಿದೆಯೋ ಅಥವಾ ಇಲ್ಲವೂ ಎಂದು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಂಚಾರಕ್ಕೆ ಅನುಕೂಲ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ತಾ.ಪಂ. ಗ್ರಾ.ಪಂ ಸದಸ್ಯರು ಹಾಗೂ ಗ್ರಾಮದ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Related posts: