RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಮತದಾರ ಪಟ್ಟಿಗೆ ಅರ್ಹ ಮತದಾರರನ್ನು ಸೇರ್ಪಡೆ ಮಾಡಿಕೊಳ್ಳಲು ವಿಶೇಷ ನೊಂದಣಿ ಅಭಿಯಾನ : ಜಿ.ಎಸ್.ಮಳಗಿ

ಗೋಕಾಕ:ಮತದಾರ ಪಟ್ಟಿಗೆ ಅರ್ಹ ಮತದಾರರನ್ನು ಸೇರ್ಪಡೆ ಮಾಡಿಕೊಳ್ಳಲು ವಿಶೇಷ ನೊಂದಣಿ ಅಭಿಯಾನ : ಜಿ.ಎಸ್.ಮಳಗಿ 

ಮತದಾರ ಪಟ್ಟಿಗೆ ಅರ್ಹ ಮತದಾರರನ್ನು ಸೇರ್ಪಡೆ ಮಾಡಿಕೊಳ್ಳಲು ವಿಶೇಷ ನೊಂದಣಿ ಅಭಿಯಾನ : ಜಿ.ಎಸ್.ಮಳಗಿ

 

ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಪೆ 22 :

 
ಬಿಟ್ಟು ಹೋದ ಮತದಾರರು ಹಾಗೂ ಮತದಾರ ಪಟ್ಟಿಗೆ ಅರ್ಹ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಹಾಗೂ ಮತದಾರ ಪಟ್ಟಿಯಲ್ಲಿ ನ್ಯೂನ್ಯತೆಯನ್ನು ಸರಿಪಡಿಸಲು ವಿಶೇಷ ನೊಂದಣಿ ಅಭಿಯಾನ ಹಮ್ಮಿಕೊಂಡಿದ್ದು ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಎಲ್ಲ ಅಧಿಕಾರಿಗಳು ಈ ಅಭಿಯಾನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕೆಂದು ತಹಶೀಲದಾರ ಜಿ.ಎಸ್.ಮಳಗಿ ಹೇಳಿದರು.
ಶುಕ್ರವಾರದಂದು ನಗರದ ತಹಶೀಲದಾರ ಕಾರ್ಯಾಲಯದಲ್ಲಿ ಮತದಾರರ ನೊಂದಣಿ ವಿಶೇಷ ಅಭಿಯಾನ ಕಾರ್ಯಕ್ರಮದ ನಿಮಿತ್ಯ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದಿ. 23, 24 ಹಾಗೂ ಮಾರ್ಚ 2 ಮತ್ತು 3ರಂದು ನಾಲ್ಕು ದಿನಗಳ ಕಾಲ ನಡೆಯುವ ಈ ಅಭಿಯಾನದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವರ್ಗಾವಣೆ ಹಾಗೂ ಬಿಡತಕ್ಕವುಗಳ ಬಗ್ಗೆ ನಿಗದಿತ ನಮೂನೆಯಲ್ಲಿ ಅರ್ಜಿ ಭರಣಾ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ ತಮ್ಮ ಪ್ರದೇಶದ ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್‍ಒ) ಗಳಿಗೆ ಅರ್ಜಿ ಸಲ್ಲಿಸಲು ಪ್ರೇರಣೆಯನ್ನು ನೀಡುವ ಕಾರ್ಯವನ್ನು ಮಾಡಬೇಕೆಂದು ಸಲಹೆ ನೀಡಿದರು.
ಯುವ ಮತದಾರರು 18-21 ವರ್ಷ ವಯೋಮಾನದ ಮತದಾರರ ನೋಂದಣಿಗೆ ಹಾಗೂ ವಿಕಲಚೇತನ ಮತದಾರರ ನೋಂದಣಿಗೆ ವಿಶೇಷ ಆದ್ಯತೆಯನ್ನು ನೀಡಿ, ಅನರ್ಹ ಮತದಾರರನ್ನು ಕಡಿಮೆ ಮಾಡುವುದು, ಪುನರಾರ್ವನೆಗೊಂಡ ಹೆಸರುಗಳನ್ನು ತೆಗೆದು ಹಾಕುವುದು, ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಈ ಅಭಿಯಾನದ ಯಶಸ್ವಿಗೆ ತಾಲೂಕಿನ ಎಲ್ಲ ಅಧಿಕಾರಿಗಳು ಕಾಳಜಿಪೂರ್ವಕವಾಗಿ ಕಾರ್ಯನಿರ್ವಹಿಸಿ ಲೋಪದೋಷಗಳಿಲ್ಲದ ಮತದಾರ ಪಟ್ಟಿಯನ್ನು ತಯಾರಿಸಲು ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.
ಸಭೆಯಲ್ಲಿ ಮೂಡಲಗಿ ತಹಶೀಲದಾರ ಮುರಳಿಧರ ತಳ್ಳಿಕೇರಿ, ಶಿಕ್ಷಣ ಅಧಿಕಾರಿಗಳಾದ ಜಿ.ಬಿ.ಬಳಗಾರ, ಎ.ಸಿ.ಮನ್ನಿಕೇರಿ, ಸಿಡಿಪಿಒ ವಾಯ್.ಎಮ್.ಗುಜನಟ್ಟಿ, ಶಿವಾನಂದ ಹಳ್ಳೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Related posts: