RNI NO. KARKAN/2006/27779|Thursday, January 15, 2026
You are here: Home » breaking news » ಖಾನಾಪುರ: ಈಜಲು ಹೋಗಿದ ಯುವಕರು ನೀರು ಪಾಲು : ಖಾನಾಪುರ ತಾಲೂಕಿನ ಬೀಡಿಯಲ್ಲಿ ಘಟನೆ

ಖಾನಾಪುರ: ಈಜಲು ಹೋಗಿದ ಯುವಕರು ನೀರು ಪಾಲು : ಖಾನಾಪುರ ತಾಲೂಕಿನ ಬೀಡಿಯಲ್ಲಿ ಘಟನೆ 

ಈಜಲು ಹೋಗಿದ ಯುವಕರು ನೀರು ಪಾಲು : ಖಾನಾಪುರ ತಾಲೂಕಿನ ಬೀಡಿಯಲ್ಲಿ ಘಟನೆ 

 

ಖಾನಾಪುರ ಮೇ 19: ತಾಲೂಕಿನ ಬೀಡಿ ಗ್ರಾಮದ ನಾಯಾನಗರ ನಿವಾಸಿ ಸಮದ ಅಬ್ದುಲ್‍ಸತ್ತಾರ ಕಿತ್ತೂರ(17) ಮತ್ತು ಕಿತ್ತೂರ ಪಟ್ಟಣ ನಿವಾಸಿ ಸಾಧಿಕ ಅಬ್ದುಲ್‍ಸಾಬ್ ಬೇಪಾರಿ(21) ನೀರಿನಲ್ಲಿ ಮುಳಗಿ ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ಜರುಗಿದೆ.

ಸಮದ್ ಎಂಬಾತ ಡಬ್ಬಿ ಕಟ್ಟಿಕೊಂಡು ಈಜಲು ಹೋದಾಗ ಕೆರೆಯ ಮಧ್ಯದಲ್ಲಿ ಡಬ್ಬಿ ಕಳಿಚಿದ್ದರಿಂದ ನೀರುಪಾಲಾಗಿದ್ದಾನೆ. ಈ ವೇಳೆ ನೀರಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನು ರಕ್ಷಿಸಲು ಹೋದ ಸಾದೀಕ್ ಕೂಡಾ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ. 

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಮಸ್ಥರು, ನುರಿತ ಈಜುಗಾರರಿಂದ ಬಾಲಕರ ಶವಗಳನ್ನು ಹೊರತೆಗೆಸಿದ್ದಾರೆ. ನಂದಗಡ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
 

Related posts: