ಗೋಕಾಕ:ಸಮಾಜದ ಋಣವನ್ನು ತೀರಿಸಲು ಸಮಾಜಮುಖಿ ಕಾರ್ಯಗಳನ್ನು ಮಾಡುವುದು ಅವಶ್ಯಕ : ಕೆ.ಎಮ್.ಬಸ್ಸಾಪೂರ
ಸಮಾಜದ ಋಣವನ್ನು ತೀರಿಸಲು ಸಮಾಜಮುಖಿ ಕಾರ್ಯಗಳನ್ನು ಮಾಡುವುದು ಅವಶ್ಯಕ : ಕೆ.ಎಮ್.ಬಸ್ಸಾಪೂರ
ಗೋಕಾಕ ಜ 26 : ಮಾನವನಾಗಿ ಹುಟ್ಟಿದ ಮೇಲೆ ಸಮಾಜದ ಋಣವನ್ನು ತೀರಿಸಲು ಸಮಾಜಮುಖಿ ಕಾರ್ಯಗಳನ್ನು ಮಾಡುವುದು ಅವಶ್ಯಕ ಎಂದು ತಂಜೀಮ ಶಿಕ್ಷಣ ಸಂಸ್ಥೆಯ ಮಾಜಿ ಗೌರವ ಕಾರ್ಯದರ್ಶಿ ಹಾಗೂ ಮುಸ್ಲಿಂ ಸಮಾಜದ ಮುಖಂಡ ಕೆ.ಎಮ್.ಬಸ್ಸಾಪೂರ ಹೇಳಿದರು.
70ನೇ ಗಣರಾಜ್ಯೋತ್ಸವದ ದಿನದಂದು ನಗರದ ಅಂಜುಮನ್-ಎ-ಇಸ್ಲಾಂ ಕಮೀಟಿಗೆ ಇಲ್ಲಿಯ ನಗರಸಭೆ ಸದಸ್ಯ ಹಾಜಿ ಕೆ.ಎಮ್.ಗೋಕಾಕ ಅವರಿಂದ ದೇಣಿಗೆಯಾಗಿ ನೀಡಿದ ಸುಸಜ್ಜಿತ ಅಂಬುಲೆನ್ಸ್ ವಾಹನ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಜಾತಿ, ಮತ, ಪಂಥ ಎನ್ನದೇ ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲಿ ಹಲವಾರು ದಶಕಗಳಿಂದ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಹಾಯ ಸಹಕಾರವನ್ನು ಸಲ್ಲಿಸುತ್ತಿರುವ ಹಾಜಿ ಕೆ.ಎಮ್.ಗೋಕಾಕ ಅವರ ಕುಟುಂಬದ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿ ಸುಸಜ್ಜಿತವಾದ ಅಂಬುಲೆನ್ಸ್‍ನ್ನು ಸಮಾಜದ ಎಲ್ಲ ವರ್ಗದವರು ಇದರ ಪ್ರಯೋಜನಯನ್ನು ಪಡೆಯಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಾಜಿ ಕೆ.ಎಮ್. ಗೋಕಾಕ ಅವರ ಕುಟುಂಬದವರನ್ನು ಕಮೀಟಿಯ ವತಿಯಿಂದ ಸತ್ಕರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮೀರಸಾಬರಾದ ಹಾಜಿ ಕುತುಬುದ್ದೀನ ಬಸ್ಸಾಪೂರೆ ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ಅಂಜುಮನ್-ಎ-ಇಸ್ಲಾಂ ಕಮೀಟಿಯ ಅಧ್ಯಕ್ಷ ಜಾವೀದ ಗೋಕಾಕ, ಉಪಾಧ್ಯಕ್ಷ ಇಲಾಹಿ ಖೈರದಿ, ಹಾಜಿ ಅಬ್ದುಲ್‍ಗಫಾರಸಾಬ ಕಾಗಜಿ,ಉಪನ್ಯಾಸಕ ಎಸ್.ಎಂ ಪೀರಜಾದೆ , ಹಾಜಿ ಸಲೀಮ್ ಖೈರದಿ, ಹಾಜಿ ಮಕಾನದಾರ, ನಗರಸಭೆ ಸದಸ್ಯರಾದ ಎಸ್.ಎ.ಕೊತವಾಲ, ಎಮ್.ಎಮ್.ಅಂಕಲಗಿ, ಎ.ಎ.ದೇಸಾಯಿ (ಅಬ್ಬಾಸ), ಮುಖಂಡರಾದ ಮೋಹಸೀನ್ ಖೋಜಾ, ಸಲೀಮ್ ಗೋಕಾಕ, ರಫೀಕ ಗೋಕಾಕ, ಇಸ್ಮಾಯಿಲ್ ಗೋಕಾಕ, ಯುಸೂಫ್ ಗೋಕಾಕ, ಡಿ.ಯು.ಅತ್ತಾರ, ಇಕ್ಬಾಲ ಬಸ್ಸಾಪೂರೆ, ಝಾಕೀರ ಅಮೀನನಾಯಿಕ, ಜುಬೇರ ತ್ರಾಸಗಾರ, ಮಹಾಂತೇಶ ಗವಿಮಠ, ಬಸವರಾಜ ಹತ್ತರಕಿ, ಬಸವರಾಜ ಮೇದಾರ, ಅಸ್ಲಮ್ ಅತ್ತಾರ ನಗರ ಯೋಜನಾ ಪ್ರಾಧಿಕಾರದ ಅಧಿಕಾರಿ ವಹೀದ ಅಖ್ತರ ಸೇರಿದಂತೆ ಅನೇಕರು ಇದ್ದರು.
