RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ಈಶ್ವರ ಮಮದಾಪೂರ ಇವರ ಮಮದಾಪೂರ ಕೃತಿಗಳು ಕೃತಿ ಲೋಕಾರ್ಪಣೆ

ಗೋಕಾಕ:ಈಶ್ವರ ಮಮದಾಪೂರ ಇವರ ಮಮದಾಪೂರ ಕೃತಿಗಳು ಕೃತಿ ಲೋಕಾರ್ಪಣೆ 

ಈಶ್ವರ ಮಮದಾಪೂರ ಇವರ ಮಮದಾಪೂರ ಕೃತಿಗಳು ಕೃತಿ ಲೋಕಾರ್ಪಣೆ

ಗೋಕಾಕ ಡಿ 26: ಎಲ್ಲೆಡೆಯೂ ಪ್ರೀತಿಯೇ ತುಂಬಿದಾಗ ದ್ವೇಷಕ್ಕೆ ನೆಲೆಯೇ ಇರುವುದಿಲ್ಲ. ಪ್ರೀತಿಗೆ ವ್ಯಾಪಕ ಅರ್ಥವಿದ್ದು ವಿಶ್ವ ನಡೆಯುವುದು ಪ್ರೀತಿಯ ಮೇಲೆಯೇ ಎಂಬುದನ್ನು ಅರಿಯಬೇಕಿದೆ ಈ ನಿಟ್ಟಿನಲ್ಲಿ ಮಮದಾಪೂರ ಚುಟುಕುಗಳು ಕೃತಿಯು ಪ್ರೀತಿಯ ಮೇಲೆ ಬೆಳಕು ಚಲ್ಲುತ್ತದೆ ಎಂದು ನಾಡಿನ ಹಿರಿಯ ಸಾಹಿತಿ ಸಿ.ಪಿ.ಕೆ ನಾಮಾಂಕಿತ ಡಾ|| ಸಿ.ಪಿ.ಕೃಷ್ಣರಾವ ಅಭಿಪ್ರಾಯ ಪಟ್ಟರು.
ಅವರು ಇತ್ತೀಚೆಗೆ ಸಾಂಸ್ಕಂತಿಕ ನಗರಿ ಮೈಸೂರಿನ ರೋಟರಿ ಸಭಾಂಗಣದಲ್ಲಿ ರಾಷ್ಟ್ರೀಯ ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕುಗಳ ಸೇವಾ ಸಮಿತಿ ಭಾರತೀಯ ಕೃಷಿಕ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ರೈತ ದಿನಾಚರಣೆ ಮತ್ತು ಮಾಜಿ ಪ್ರಧಾನಿ ದಿ. ಚೌದರಿ ಚರಣಸಿಂಗ್ ಅವರ 116ನೇ ಜನ್ಮದಿನಾಚರಣೆ ನೆನೆಪಿನಲ್ಲಿ ಗೋಕಾಕದ ಕವಿ ಈಶ್ವರ ಮಮದಾಪೂರ ಇವರ ಮಮದಾಪೂರ ಕೃತಿಗಳು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃತಿಗಳು ಬಿಡುಗಡೆಯಾಗುತ್ತವೆ. ಕೇವಲ ಸಂಖ್ಯೆಗಳಿಗೆ ಜೋತು ಬಿದ್ದರೆ ಗಟ್ಟಿ ಕಾಳುಗಳು ಹೊಂದುವುದಿಲ್ಲ. ಕೆಲವೇ ಗಟ್ಟಿ ಕಾಳುಗಳು ಸಿಗುತ್ತವೆ. ಈ ನಿಟ್ಟಿನಲ್ಲಿ ಮಮದಾಪೂರ ಚುಟುಕುಗಳು ಗಟ್ಟಿ ಕಾಳುಗಳನ್ನು ಹೊಂದಿರುವ ಕೃತಿಯಾಗಿದೆ. ಇದರಲ್ಲಿ ಪ್ರೀತಿ ಹಾಗೂ ಒಲವಿನ ಪ್ರವಾಹವೇ ಹರಿದಿರುವುದರಿಂದ ಈಶ್ವರ ಮಮದಾಪೂರ ಇವರು ಪ್ರೀತಿಯ ಜೊತಕವಾಗಿ ಗೋಚರಿಸುತ್ತಿದ್ದಾರೆ ಎಂದು ವ್ಯಾಖ್ಯಾನಿಸಿದರು.
ಮೈಸೂರು ವಿಶ್ವವಿದ್ಯಾನಿಯದ ಕುಲಪತಿ ಪ್ರೋ. ಜೆ. ಹೇಮಂತಕುಮಾರ ಮಾತನಾಡುತ್ತಾ- ರೈತ ದಿನದ ಸಂದರ್ಭದಲ್ಲಿಯೇ ರೈತರನ್ನು ಸತ್ಕರಿಸುವುದರ ಜೊತೆಗೆ ಪ್ರೇಮ ಕವಿ ಈಶ್ವರ ಮಮದಾಪೂರ ಇವರ ಕೃತಿ ಬಿಡುಗಡೆಯಾಗುತ್ತಿರುವುದು ಖುಷಿ ತಂದಿದೆ. ಮಮದಾಪೂರರವರ ಇನ್ನಷ್ಟು ಕೃತಿಗಳು ಹೊರಬರಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕೇಂದ್ರ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ|ಎಂ.ಜಿ.ಆರ್ ಅರಸ್ ಮಾತನಾಡುತ್ತಾ- ಮಮದಾಪೂರ ಇವರ ಚುಟುಕುಗಳು ಮೈಸೂರಿನ ಕವಿ ಮಿತ್ರರ ಮನಸ್ಸು ಗೆದ್ದಿದ್ದು ಅವರಿಂದ ಇನ್ನಷ್ಟು ಕೃತಿಗಳನ್ನು ನಿರೀಕ್ಷಿಸುತ್ತಿದ್ದೇವೆ. ಶೀಘ್ರದಲ್ಲಿ ಮಮದಾಪೂರ ಹನಿಗಳು ಬಿಡುಗಡೆ ಮಾಡಲಾಗುತ್ತದೆ ಎಂದರು.
ಸಾನಿಧ್ಯ ವಹಿಸಿದ್ದ ತುಮಕೂರು ಹಿರೇಮಠದ ಡಾ| ಶಿವಾಚಾರ್ಯ ಸ್ವಾಮಿಜಿ ಆಶೀರ್ವಚನ ನೀಡಿದರು.
ಇದೇ ವೇಳೆ ಪ್ರಗತಿ ಪರ ರೈತರನ್ನು ಹಾಗೂ ಕವಿ ಈಶ್ವರ ಮಮದಾಪೂರ , ಡಾ.ಸಿ.ಪಿ.ಕೆ., ಪ್ರೋ.ಕೆ.ಭೈರವಮೂರ್ತಿ, ಡಾ||ಎಂ.ಜಿ.ಆರ್ ಅರಸ್, ಸಂಜನಗೂಡು ನಗರ ಸಭೆಯ ಎಡ್ಲ್ಯೂಇ ಆರ್ ಭಾಸ್ಕರ್ ಮುಂತಾದವರನ್ನು ಸತ್ಕರಿಸಿ ಗೌರವಿಸಲಾಯಿತು.
ವೇದಿಕೆಯ ಮೇಲೆ ತುಮಕೂರು ಹಿರೇಮಠದ ಡಾ|| ಶಿವಕುಮಾರ ಶಿವಾಚಾರ್ಯ ಸ್ವಾಮಿಜಿ, ಹಿರಿಯ ಸಾಹಿತಿ ಪ್ರೋ. ಕೆ. ಭೈರವಮೂರ್ತಿ, ಮೂಗುರು ಮಧು ದಿಕ್ಷಿತ್, ಡಾ. ಎಂ.ಜಿ.ಆರ್ ಅರಸ್, ಕೆ.ಪಿ.ಶಾಂತ, ಮಹಾದೇವ ಪ್ರಸಾದ, ಜಿ.ಡಿ.ಮಹದೇವಸ್ವಾಮಿ, ರತ್ನಾ ಹಾಲಪ್ಪಗೌಡ, ನಂಜನಗೂಡು ನಗರಸಭೆಯ ಎಡ್ಲ್ಯೂಇ ಆರ್. ಭಾಸ್ಕರ್, ಡಾ||ಗೀತಾ ಗಣೇಶ, ಸವಿತಾ ದಾಸರಗುಪ್ಪೆ ಉಪಸ್ಥಿತರಿದ್ದರು.

Related posts: