RNI NO. KARKAN/2006/27779|Thursday, April 2, 2026
You are here: Home » breaking news » ಬೆಳಗಾವಿ:ಪಕ್ಷದ ನಿರ್ಧಾರ ಎಲ್ಲರೂ ಪಾಲಿಸಬೇಕು : ನಿಯೋಜಿತ ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ:ಪಕ್ಷದ ನಿರ್ಧಾರ ಎಲ್ಲರೂ ಪಾಲಿಸಬೇಕು : ನಿಯೋಜಿತ ಸಚಿವ ಸತೀಶ ಜಾರಕಿಹೊಳಿ 

ಪಕ್ಷದ ನಿರ್ಧಾರ ಎಲ್ಲರೂ ಪಾಲಿಸಬೇಕು : ನಿಯೋಜಿತ ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ ಡಿ 22 : ಪಕ್ಷದ ನಿರ್ಧಾರ ಎಲ್ಲರೂ ಪಾಲಿಸಿ ಪಕ್ಷ ಸಂಘಟಿಸಬೇಕೆಂದು ನಿಯೋಜಿತ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ .

ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಎರೆಡನೇಯ ಅವಧಿಗೆ ಸಚಿವ ಸ್ಥಾನದ ಆಕಾಂಕ್ಷೆ ಇಡಲಾಗಿತ್ತು ಆದರೆ ಪಕ್ಷ ಈಗಲೇ ಸಚಿನ ಸ್ಥಾನದ ಅವಕಾಶ ಒದಗಿಸಿದೆ ಪಕ್ಷ ನೀಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಲಾಗುವದು. ರಮೇಶ ಜಾರಕಿಹೊಳಿ ಅವರಿಗೆ ಸಂಪುಟದಲ್ಲಿ ಸ್ದಾನ ದೊರೆತಾಗ ನಾವು ಸುಮ್ಮನಿದ್ದು , ಅವರಿಗೆ ಸಹಕಾರ ನೀಡಿದೆವು ಈಗ ಅವರು ನಮಗೆ ಸಹಕಾರ ನೀಡಿ ಪಕ್ಷ ಸಂಘಟನೆಯಲ್ಲಿ ಶ್ರಮಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ನಿಯೋಜಿತ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಜನ ಸಂರ್ಪಕ ಇರುವ ಖಾತೆ ನೀಡಿದರೆ ರಾಜ್ಯಾದ್ಯಂತ ಸಂಚರಿಸಿ ಕೆಲಸ ಮಾಡಲು ಅನುಕೂಲವಾಗತ್ತದೆ ನನ್ನ ಬಯಕೆ ಆದರೆ ಯಾವ ಖಾತೆ ನೀಡಬೇಕು ಎಂಬುವದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಯಾವುದೆ ಖಾತೆ ನೀಡಿದರು ಸಹ ಆ ಖಾತೆಗೆ ನ್ಯಾಯ ದೊರಕಿಸಿಕೊಡವ ಪ್ರಾಮಾಣಿಕ ಪ್ರಯತ್ನ ಮಾಡಲಾಗುದು ಎಂದು ಸತೀಶ ಜಾರಕಿಹೊಳಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು

Related posts: