RNI NO. KARKAN/2006/27779|Thursday, January 15, 2026
You are here: Home » breaking news » ಗೋಕಾಕ:ಸಾಧನ ಸಂಭ್ರಮ ಸಮಾರಂಭಕ್ಕೆ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಆಹ್ವಾನ

ಗೋಕಾಕ:ಸಾಧನ ಸಂಭ್ರಮ ಸಮಾರಂಭಕ್ಕೆ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಆಹ್ವಾನ 

ಸಾಧನ ಸಂಭ್ರಮ ಸಮಾರಂಭಕ್ಕೆ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಆಹ್ವಾನ

ಗೋಕಾಕ ಡಿ 20 : ತಾಲೂಕಿನ ಸುಕ್ಷೇತ್ರ ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ 2019 ಜನೇವರಿ 1ರಿಂದ 3ರವರೆಗೆ ನಡೆಯಲಿರುವ ಶ್ರೀ ನಿಜಗುಣ ದೇವರ ಸಾಧನ ಸಂಭ್ರಮ ಸಮಾರಂಭಕ್ಕೆ ಆಗಮಿಸುವಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲಾಯಿತು.
ಅರಭಾವಿ ಶಾಸಕರು ಹಾಗೂ ಸಾಧನ ಸಂಭ್ರಮ ಸಮಾರಂಭದ ಕಾರ್ಯಾಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರ ನೇತ್ರತ್ವದಲ್ಲಿ ಬೆಳಗಾವಿಯಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಹ್ವಾನಿಸಿದರು. ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಈ ಸಾಧನ ಸಂಭ್ರಮ ಸಮಾರಂಭಕ್ಕೆ ನಾನು ಖಂಡಿತವಾಗಿ ಬರುತ್ತೇನೆ ಅಂತಾ ಹೇಳಿದರು.
ಈ ಸಂದರ್ಭದಲ್ಲಿ ಕುಡಚಿ ಶಾಸಕ ಪಿ.ರಾಜೀವ, ಹುಕ್ಕೇರಿಯ ಗುರುಶಾಂತೇಶ್ವರ ಹಿರೇಮಠದ ಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿ, ಶ್ರೀಮಠದ ನಿಜಗುಣ ದೇವರು, ಮಾಜಿ ಸಚಿವ ಲಕ್ಷ್ಮಣ ಸವದಿ, ಮುಖಂಡ ರಾಮನಾಯ್ಕ ನಾಯ್ಕ ಸೇರಿದಂತೆ ಇತರರು ಇದ್ದರು.

Related posts: