ಗೋಕಾಕ:ದೇಗುಲದ ನೂತನ ಕಟ್ಟಡ ಕಾಮಗಾರಿ ವಿಕ್ಷಣೆ
ದೇಗುಲದ ನೂತನ ಕಟ್ಟಡ ಕಾಮಗಾರಿ ವಿಕ್ಷಣೆ
ಬೆಟಗೇರಿ ನ 21 : ಹನುಮಂತ ದೇವರಿಗೆ ಶತ ಶತಮಾನಗಳ ಇತಿಹಾಸವಿದೆ. ಸ್ಥಳೀಯರು ದೇವರ ಮೇಲೆ ಭಯ, ಭಕ್ತಿಯುಳ್ಳವರಾಗಿದ್ದಾರೆ ಎಂದು ಬೆಳಗಾವಿ ಲೋಕಸಭಾ ಸದಸ್ಯ ಸುರೇಶ ಅಂಗಡಿ ಹೇಳಿದರು.
ಗ್ರಾಮದ ಹನುಮಂತ ದೇವರ ದೇವಸ್ಥಾನಕ್ಕೆ ಮಂಗಳವಾರ ನ.20ರಂದು ಸಂಜೆ 7 ಗಂಟೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ದರ್ಶನಾಶೀರ್ವಾದ ಪಡೆದ ಬಳಿಕ ದೇಗುಲದ ನೂತನ ಕಟ್ಟಡ ಕಾಮಗಾರಿ ವಿಕ್ಷೀಸಿ ಅವರು ಮಾತನಾಡಿ, ಸ್ಥಳೀಯ ಗ್ರಾಮಸ್ಥರು ಧಾರ್ಮಿಕವಾಗಿ ಸಹಕರಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ರಾಮಣ್ಣ ಬಳಿಗಾರ, ಬಸವರಾಜ ಪಣದಿ, ಶ್ರೀಶೈಲ ಗಾಣಗಿ, ಬಸಪ್ಪ ಮೇಳೆಣ್ಣವರ, ಅಶೋಕ ಕೋಣಿ, ಸುರೇಶ ದಂಡಿನ, ಶಿವು ನಾಯ್ಕರ, ಮಂಜು ಪತ್ತಾರ, ಸಂಜು ಪೂಜೇರ ಸೇರಿದಂತೆ ಗಣ್ಯರು, ಗ್ರಾಮಸ್ಥರು ಇದ್ದರು.