ಗೋಕಾಕ:ಬೆಟಗೇರಿ ಗ್ರಾಮದ ಶ್ರೀ ಭರಮದೇವರ ಜಾತ್ರಾಮಹೋತ್ಸವ ಸಂಪನ್ನ
ಬೆಟಗೇರಿ ಗ್ರಾಮದ ಶ್ರೀ ಭರಮದೇವರ ಜಾತ್ರಾಮಹೋತ್ಸವ ಸಂಪನ್ನ
ಬೆಟಗೇರಿ ನ 7 : ಗ್ರಾಮದ ಭರಮದೇವರ ಜಾತ್ರಾಮಹೋತ್ಸವ ಪ್ರಯುಕ್ತ ಸೋಮವಾರ ನ.5 ರಂದು ರಾತ್ರಿ 10 ಗಂಟೆಗೆ ಮುಕ್ತ ಪಗಡಿ ಆಟದ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಥಳೀಯ ದುರ್ಗಾದೇವಿ ಮತ್ತು ಫತ್ತರಿಗಿ ಭಾಗ್ಯವಂತಿದೇವಿ ತಂಡ ಪ್ರಥಮ ಸ್ಥಾನ, ಗ್ರಾಮದೇವತೆ ತಂಡ ದ್ವೀತಿಯ ಸ್ಥಾನ ಪಡೆದು ಜಯ ಸಾಧಿಸಿದವು.
ಮಲ್ಲಪ್ಪ ಪಣದಿ, ಮಂಜು ಪತ್ತಾರ, ಶಿವು ನಾಯ್ಕರ, ಪುಂಡಲೀಕ ನಾವಿ, ಬಸು ಕರಿಗಾರ, ಹನುಮಂತ ಕರಿಗಾರ, ನಾಗಪ್ಪನ ಸವತಿಕಾಯಿ, ಮುತ್ತೆಪ್ಪ ಕುರಬರ, ಹಾಲಪ್ಪ ಖಿಲಾರಿ, ದೇವಪ್ಪ ಚಂದರಗಿ ಸೇರಿದಂತೆ ಗ್ರಾಮದ ಗ್ರಾಮಸ್ಥರು, ಭರಮದೇವರ ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ಇತರರು ಇದ್ದರು.
ಸಡಗರದಿಂದ ನಡೆದ ಧಾರ್ಮಿಕ ಕಾರ್ಯಕ್ರಮ: ಇಲ್ಲಿಯ ಭರಮದೇವರ ದೇವಾಲಯದಲ್ಲಿ ಸೋಮವಾರ ನ. 5 ರಂದು ಬೆಳಿಗ್ಗೆ 5 ಗಂಟೆಗೆ ಭರಮದೇವರ ಗದ್ದುಗೆಗೆ ಮಹಾಭಿಷೇಕ, ಮಹಾಪೂಜೆ ನಡೆದ ಬಳಿಕ ಪುರಜನರಿಂದ ಪೂಜೆ ಪುನಸ್ಕಾರ ನೈವೇಧ್ಯ ಸರ್ಮಪಿಸುವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಡಗರದಿಂದ ಜರುಗಿದವು. ಮಹಾಪ್ರಸಾದ ನಡೆದು ಜಾತ್ರಾಮಹೋತ್ಸವ ಸಂಪನ್ನಗೊಂಡಿತು. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಭರಮದೇವರ ಭಕ್ತರು, ಗ್ರಾಮಸ್ಥರು ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.