RNI NO. KARKAN/2006/27779|Monday, August 4, 2025
You are here: Home » breaking news » ಘಟಪ್ರಭಾ:ಭೂತಾನ ಸಮ್ಮೇಳನದಲ್ಲಿ ಭಾಗವಹಿಸಿ ತಾಯ್ನಾಡಿಗೆ ಮರಳಿದ ಕರವೇ ಪದಾಧಿಕಾರಿಗಳಿಗೆ ಭವ್ಯ ಸ್ವಾಗತ

ಘಟಪ್ರಭಾ:ಭೂತಾನ ಸಮ್ಮೇಳನದಲ್ಲಿ ಭಾಗವಹಿಸಿ ತಾಯ್ನಾಡಿಗೆ ಮರಳಿದ ಕರವೇ ಪದಾಧಿಕಾರಿಗಳಿಗೆ ಭವ್ಯ ಸ್ವಾಗತ 

ಭೂತಾನ ಸಮ್ಮೇಳನದಲ್ಲಿ ಭಾಗವಹಿಸಿ ತಾಯ್ನಾಡಿಗೆ ಮರಳಿದ ಕರವೇ ಪದಾಧಿಕಾರಿಗಳಿಗೆ ಭವ್ಯ ಸ್ವಾಗತ

ಘಟಪ್ರಭಾ ಅ 31 : ಭೂತಾನ ರಾಷ್ಟ್ರದ ರಾಜ್ಯಧಾನಿ ಥಿಂಪೂ ಮಹಾನಗರದಲ್ಲಿ ಜರುಗಿದ ಭೂತಾನ ಅಂತರರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನವನ್ನು ಯಶಸ್ವಿಗೋಳಿಸಿ “ವರ್ಷದ ಅಂತರಾಷ್ಟ್ರೀಯ ವ್ಯಕ್ತಿ ” ಪ್ರಶಸ್ತಿ ಸ್ವಿಕರಿಸಿ , ಕವಿಗೋಷ್ಠಿ ಮತ್ತು ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಕನ್ನಡದ ಕೀರ್ತಿ ಪತಾಕೆಯನ್ನು ಭೂತಾನ ರಾಷ್ಟ್ರದಲ್ಲಿ ಹಾರಿಸಿ ಮಂಗಳವಾರ ಸಾಯಂಕಾಲ ಘಟಪ್ರಭಾ ರೈಲು ನಿಲ್ದಾಣದಲ್ಲಿ ಬಂದಿಳಿದ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಮತ್ತು ಕಾರ್ಯದರ್ಶಿ ಸಾಧಿಕ ಹಲ್ಯಾಳ ಅವರೋಟ್ಟಿಗೆ ತೆರಳಿದ್ದ ನಾರಾಯಣ ವಾಗುಲೇ, ಮಹಾಂತೇಶ ಹಿರೇಮಠ , ರಾಜೇಂದ್ರ ಕೆಂಚನಗುಡ್ಡ , ಬಸವರಾಜ ಹತರಕ್ಕಿ, ಬಾಹುಬಲಿ ಖಾರೇಪಠಾಣ ಅವರುಗಳಿಗೆ ಧೂಪದಾಳ ಗ್ರಾಮ ಘಟಕ ಮತ್ತು ಸುತ್ತಮುತ್ತಲಿನ ಗ್ರಾಮ ಘಟಕಗಳ ಕರವೇ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು.

ಕಾರ್ಯಕರ್ತರ ಸ್ವಾಗತವನ್ನು ಸ್ವೀಕರಿಸಿ ಮಾತನಾಡಿದ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಗೋಲ್ಬಲ್ ಮ್ಯಾನ್ ಪೀಸ್ ಪೌಂಡೇಶನ್ ಹೋರ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವದು ಶ್ಲಾಘನೀಯ . ಕಳೆದ 13 ವರ್ಷಗಳಿಂದ ಕನ್ನಡವನ್ನು ಉಳಿಸಿ ಬೆಳೆಸುವ ನಮ್ಮ ಅಳಿಲು ಸೇವೆಯನ್ನು ಗುರುತಿಸಿ ಭೂತಾನ ರಾಷ್ಟ್ರಕ್ಕೆ ಕರೆಯಿಸಿ , ಪ್ರಶಸ್ತಿ ನೀಡಿ ಸತ್ಕರಿಸಿ ಗೌರವಿಸಿ ಕನ್ನಡ ಭಾಷೆಯ ಬಗ್ಗೆ ಮಾತನಾಡಲು ಅವಕಾಶ ನೀಡಿದ ಸಮಾವೇಶದ ಸಂಘಟಕರಿಗೆ ಧನ್ಯವಾದಗಳು ಅರ್ಪಿಸಿದ ಖಾನಪ್ಪನವರ ಕನ್ನಡ ಭಾಷೆ ಮತ್ತು ಕನ್ನಡ ಸಾಂಸ್ಕೃತಿಕಯನ್ನು ಹೋರ ರಾಷ್ಟ್ರದವರು ಪ್ರೀತಿಸುತ್ತಿರುವದು ಕನ್ನಡದ ಹೆಮ್ಮೆ . ಎಲ್ಲರೂ ಒಗ್ಗಟಿನಿಂದ ಕನ್ನಡ ಸಂಸ್ಕೃತಿಯನ್ನು ಉಳಿಸಿ , ಬೆಳೆಸಿ ಕನ್ನಡ ಬೇರುಗಳನ್ನು ವಿಶ್ವದಾದ್ಯಂತ ಗಟ್ಟಿಗೋಳಿಸಲು ಕಂಕಣಬದ್ದವಾಗೋಣ ಭೂತಾನದಲ್ಲಿ ದೋರೆತ ಪ್ರಶಸ್ತಿಯನ್ನು ಭೂವನೇಶ್ವರಿ ತಾಯಿ ಹಾಗೂ ಕರವೇ ಕಾರ್ಯಕರ್ತರಿಗೆ ಅರ್ಪಿಸುವದಾಗಿ ಹೇಳಿದರು ಎಂದು ಹೇಳಿದರು

ಈ ಸಂದರ್ಭದಲ್ಲಿ ಕೃಷ್ಣಾ ಖಾನಪ್ಪನವರ , ರಹೇಮಾನ ಮೋಕಾಶಿ ,ದೀಪಕ ಹಂಜಿ , ನಿಜಾಮ ನಧಾಪ , ಶೇಟೆಪ್ಪಾ ಗಾಡಿವಡ್ಡರ , ವಂಸತ ತೆಳಗೇರಿ,ರಮೇಶ ಕಮತಿ, ಅಜಿತ ಮಲ್ಲಾಪುರೆ , ಕೆಂಪಣ್ಣಾ ಕಡಕೋಳ , ಅಮೀರಖಾನ ಜಗದಾಳ , ಲಾಜಿಮ ಮೊಕಾಶಿ , ರಾಜು ಗಾಡಿವಡ್ಡರ , ಶಂಕರ ಗಾಡಿವಡ್ಡರ , ‌ಇಸಾಕ ಬಾಗೇವಾಡಿ , ರಾಜು ಕಳಸನ್ನವರ , ಲಗಮಣ್ಣಾ ಸನದಿ , ಬಸು ಗಾಡಿವಡ್ಡರ , ಸಂಜು ಗಾಡಿವಡ್ಡರ , ಸಂದೀಪ ಕಳ್ಳಿಮನಿ , ರಾಮ ಕೊಂಗನೊಳ್ಳಿ , ಭೀಮಪ್ಪಾ ಪುಠಾಣಿ , ದತ್ತು ಕೋಲಕಾರ , ಭರಮಪ್ಪಾ ಪೂಜೇರಿ , ಬಸು ಹಂಜಿ , ಮರಗಪ್ಪಾ ಗಾಡಿವಡ್ಡರ , ಯಮನೂರ ಗಾಡಿವಡ್ಡರ , ಮಲ್ಲಪ್ಪಾ ಗಾಡಿವಡ್ಡರ ಸೇರಿದಂತೆ ಇನ್ನು ಅನೇಕರು ಇದ್ದರು…

Related posts: