RNI NO. KARKAN/2006/27779|Wednesday, January 14, 2026
You are here: Home » breaking news » ಗೋಕಾಕ:ವೀರ ಮರಣ ಹೊಂದಿದ ಯೋಧ ಉಮೇಶ್ ನಿಧನಕ್ಕೆ ಕರವೇ ಅಧ್ಯಕ್ಷ ಖಾನಪ್ಪನವರ ಸಂತಾಪ

ಗೋಕಾಕ:ವೀರ ಮರಣ ಹೊಂದಿದ ಯೋಧ ಉಮೇಶ್ ನಿಧನಕ್ಕೆ ಕರವೇ ಅಧ್ಯಕ್ಷ ಖಾನಪ್ಪನವರ ಸಂತಾಪ 

ವೀರ ಮರಣ ಹೊಂದಿದ ಯೋಧ ಉಮೇಶ್ ನಿಧನಕ್ಕೆ ಕರವೇ ಅಧ್ಯಕ್ಷ ಖಾನಪ್ಪನವರ ಸಂತಾಪ

ಗೋಕಾಕ ಅ 22 : ಕಳೆದ ಶನಿವಾರ ಸಂಜೆ ಇಂಪಾಲಾದ ನಾಗಂಪಾಲದಲ್ಲಿ ಉಗ್ರರು ಸೇನಾ ಟ್ರಕ್‍ನಲ್ಲಿ ಎಸೆದ ಗ್ರೇನೆಡ್‍ನ್ನು ಕೈನಲ್ಲಿ ಹಿಡಿದು ವೀರ ಮರಣ ಹೊಂದಿದ ಸಿಆರ್‍ಪಿಎಫ್ ಯೋಧ ಗೋಕಾಕದ ಉಮೇಶ ಹೆಳವರ ವೀರ ಮರಣಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಸಂತಾಪ ಸೂಚಿಸಿದ್ದಾರೆ

ತನ್ನ ಜೀವವನ್ನು ಒತ್ತೆ ಇಟ್ಟು ತಮ್ಮ 20 ಸೈನಿಕರ ಜೀವ ಉಳಿಸಿ ಉಮೇಶ ಅವರು ಹುತಾತ್ಮನಾಗಿ ರಾಷ್ಟ್ರಾಭಿಮಾನ ತೋರಿಸಿಕೊಟ್ಟಿದ್ದಾರೆ. ವೀರ ಯೋಧನ ಕುಟುಂಬದಲ್ಲಾದ ದುಃಖದಲ್ಲಿ ನಾವು ಸಹಭಾಗಿಯಾಗಿದ್ದೇವೆ. ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಹೆಳವರ ಕುಟುಂಬಕ್ಕೆ ನೀಡಲೆಂದು ಯೋಧನ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡು ಪ್ರಾರ್ಥಿಸಿದ್ದಾರೆ.

Related posts: