RNI NO. KARKAN/2006/27779|Monday, July 14, 2025
You are here: Home » breaking news » ಮೂಡಲಗಿ:ಮಹಾತ್ಮ ಗಾಂದೀಜಿ ಮತ್ತು ಶಾಸ್ತ್ರೀಜಿ ದೇಶದ ಅಪರೂಪದ ನಾಯಕರಾಗಿದ್ದರು: ಎ.ಪಿ ಪರಸನ್ನವರ

ಮೂಡಲಗಿ:ಮಹಾತ್ಮ ಗಾಂದೀಜಿ ಮತ್ತು ಶಾಸ್ತ್ರೀಜಿ ದೇಶದ ಅಪರೂಪದ ನಾಯಕರಾಗಿದ್ದರು: ಎ.ಪಿ ಪರಸನ್ನವರ 

ಮಹಾತ್ಮ ಗಾಂದೀಜಿ ಮತ್ತು ಶಾಸ್ತ್ರೀಜಿ ದೇಶದ ಅಪರೂಪದ ನಾಯಕರಾಗಿದ್ದರು: ಎ.ಪಿ ಪರಸನ್ನವರ
ಮೂಡಲಗಿ ಅ 3 : ಮಹಾತ್ಮ ಗಾಂದೀಜಿ ಮತ್ತು ಶಾಸ್ತ್ರೀಜಿ ದೇಶದ ಅಪರೂಪದ ನಾಯಕರಾಗಿದ್ದು, ಅವರ ತತ್ವಾದರ್ಶಗಳು ಎಲ್ಲರು ಅಳವಡಿಸಿಕೊಳ್ಳುವಂತಹದಾಗಿವೆ. ಶ್ರೇಷ್ಠ ನಾಯಕರ ಗುಣಗಳು ನಮ್ಮಲ್ಲಿಯೊ ಮೈಗೂಡಿಸಿಕೊಳ್ಳಬೇಕೆಂದು ಎಸ್ಸಿ ಎಸ್ಟಿ ನೌಕರ ಸಂಘದ ಅಧ್ಯಕ್ಷ ಎ.ಪಿ ಪರಸನ್ನವರ ಹೇಳಿದರು.
ಅವರು ಸರಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಆಯೋಜಿಸಿದ್ದ ಮಹಾತ್ಮಾ ಗಾಂಧೀಜಿ ಮತ್ತು ಲಾಲ ಬಹದ್ದೂರ ಶಾಸ್ತ್ರೀಯವರ ಜಯಂತಿ ಆಚರಣಿಯಲ್ಲಿ ಭಾಗವಹಿಸಿ ಮಾತನಾಡಿದರು. ದೇಶದ ಅಪ್ರತಿಮ ನಾಯಕರ ದಿನಾಚರಣೆಗಳನ್ಮ್ನ ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳ ಬೇಕು. ವಿದ್ಯಾರ್ಥಿ ದೆಸೆಚಿiÀುಲ್ಲಿ ಪ್ರತಿಯೊಬ್ಬರು ತಪ್ಪದೆ ಮಹಾನ್ ನಾಯಕರ ಗುಣಗಳನ್ನು ಬೆಳೆಸಿಕೊಂಡು ದೇಶದ ಆಸ್ತಿಗಳಾಗಿ ನಿರ್ಮಾಣವಾಗ ಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ನೂತನವಾಗಿ ಪುರಸಭೆಗೆ ಸದಸ್ಯರಾಗಿ ಆಯ್ಕೆಯಾದ ಕುರ್ಶಾದ ನದಾಫ್ ಅವರನ್ನು ಸತ್ಕರಿಸಿದರು. ಸಮಾಜ ಸೇವಕ ಅನ್ವರ ನದಾಫ್ ಶಾಲೆಗೆ ತಮ್ಮ ಸ್ವಂತ ಖರ್ಚಿನಲ್ಲಿ ಜಲ ಕುಂಭ ನಿರ್ಮಿಸುವದಾಗಿ ವಾಗ್ದಾನ ಮಾಡಿದರು.
ಕಾರ್ಯಕ್ರಮದ ಎಸ್.ಡಿಎಮ್.ಸಿ ಅದ್ಯಕ್ಷೆ ಸರಸ್ವತಿ ಗುಡ್ಲಮನಿ, ಎಮ್ ಎಸ್ ಕೊಣ್ಣೂರ, ಶ್ಯಾನೂರ ಬುಲಬುಲೆ, ಎಸ್.ಎಲ್ ಪಾಟೀಲ್ ಮತ್ತಿತರರು ಭಾಗವಹಿಸಿದ್ದರು. ನಂತರ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಜೆ.ಎಸ್ ಅಣ್ಣಿಗೇರಿ ನಿರೂಪಿಸಿದರು. ಎಸ್.ಪಿ ಪಾಟೀಲ ಸ್ವಾಗತಿಸಿ, ಎಸ್.ಪಿ ಜಕಾತಿ ವಂದಿಸಿದರು.

Related posts: