ಗೋಕಾಕ:ಬೆಟಗೇರಿ ಪಿಕೆಪಿಎಸ್‍ಗೆ 14.98 ಲಕ್ಷ ರೂಪಾಯಿ ಲಾಭ : ಅಡಿವೆಪ್ಪ ಮುರಗೋಡ
ಬೆಟಗೇರಿ ಪಿಕೆಪಿಎಸ್‍ಗೆ 14.98 ಲಕ್ಷ ರೂಪಾಯಿ ಲಾಭ : ಅಡಿವೆಪ್ಪ ಮುರಗೋಡ
ಬೆಟಗೇರಿ ಸೆ 22 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 75ನೇಯ ವಾರ್ಷಿಕ ಸರ್ವಸಾಧಾರಣ ಮಹಾಸಭೆ ಶನಿವಾರ ಸೆ.22ರಂದು ಸಂಘದ ಕಾರ್ಯಾಲಯದಲ್ಲಿ ನಡೆಯಿತು.
ಸಂಘದ ಮುಖ್ಯಕಾರ್ಯನಿರ್ವಾಹಕ ಅಡಿವೆಪ್ಪ ಮುರಗೋಡ ವಾರ್ಷಿಕ ವರದಿ ಮಂಡಿಸಿ ಮಾತನಾಡಿದ ಅವರು, ಸಂಘವು ಸನ್2017-18ನೇ ಸಾಲಿನಲ್ಲಿ ಸಂಘವು 10,56,96253 ರೂ ಒಟ್ಟು ದುಡಿಯುವ ಬಂಡವಾಳ ಹೊಂದಿ, ಈಗ 14,98,219 ರೂ ನಿವ್ವಳ ಲಾಭ ಗಳಿಸಿದೆ. ಸಂಘದ ಶೇರು ಸದಸ್ಯರಿಗೆ ಶೇ5 ರಷ್ಟು ಡಿವ್ಹಿಡೆಂಡ್ ಸದಸ್ಯರಿಗೆ ವಿತರಿಸಲಾಗುವದು ಎಂದು ತಿಳಿಸಿದರು.
ಸಂಘದ ಶೇರ ಸದಸ್ಯರು, ಗ್ರಾಹಕರು, ಗ್ರಾಮದ ಪ್ರಮುಖ ನಾಗರಿಕರ ಜೊತೆ ಆಡಳಿತ ಮಂಡಳಿ ಸದಸ್ಯರು ಸಂಘದ ಸಮಗ್ರ ಪ್ರಗತಿ ಹಾಗೂ ಬಿಡಿಸಿಸಿ ಬ್ಯಾಂಕ್, ಹಳ್ಳಿಗಳಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ರೈತರಿಗೆ ದೊರಕುವ ವಿವಿಧ ಸಾಲ, ಸಹಾಯ ಸೌಲಭ್ಯಗಳ ಕುರಿತು ಈ ಸಂದಭರ್Àದಲ್ಲಿ ಚರ್ಚಿಸಿದರು. ಸಂಘದ ಅಧ್ಯಕ್ಷ ಸದಾಶಿವ ಕುರಿ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು.
ಪುಂಡಲೀಕಪ್ಪ ಪಾರ್ವತೇರ, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಪಿ.ಕೆ.ನೀಲಣ್ಣವರ, ಬಸವ್ವ ದೇಯಣ್ಣವರ, ಉದ್ದವ್ವ ಬಾಣಸಿ, ರಾಮಪ್ಪ ಬಳಿಗಾರ, ಸುಭಾಷ ಜಂಬಗಿ, ಲಕ್ಕಪ್ಪ ಚಂದರಗಿ, ಅರ್ಜುನ ಅಂದಾನಿ, ಶಿವಪ್ಪ ಕತ್ತಿ, ಲಕ್ಷ್ಮಣ ಸವತಿಕಾಯಿ, ಶಂಕರ ಕೋಣಿ, ಪಿ.ಕೆ.ಕೋಣಿ, ಶಿವಾಜಿ ನೀಲಣ್ಣವರ, ಶ್ರೀಶೈ¯ ಗಾಣಗಿ ಸೇರಿದಂತೆ ಸಂಘದ ಆಡಳಿತ ಮಂಡಳಿ ಸದಸ್ಯರು, ಶೇರ ಸದಸ್ಯರು, ಗ್ರಾಹಕರು, ಸಂಘದ ಸಿಬ್ಬಂದಿ ವರ್ಗ, ಮತ್ತಿತರು ಇದ್ದರು.
ಎ.ಎಮ್.ಮುರಗೋಡ ಸ್ವಾಗತಿಸಿದರು, ಮುತ್ತೆಪ್ಪ ದೇಯಣ್ಣವರ ಕಾರ್ಯಕ್ರಮ ನಿರೂಪಿಸಿದರು, ಮಹಾದೇವ ಕೋಣಿ ಕೊನೆಗೆ ವಂದಿಸಿದರು.