ಗೋಕಾಕ:ಬಿಳ್ಕೋಡುವ ಸಮಾರಂಭ
ಬಿಳ್ಕೋಡುವ ಸಮಾರಂಭ
ಗೋಕಾಕ ಅ 31 : ಇಲ್ಲಿಯ ಟಿಎಪಿಎಸ್‍ಎಂಎಸ್ ನಲ್ಲಿ ಸುಮಾರು 14 ವರ್ಷಗಳ ಕಾಲ ವ್ಯವಸ್ಥಾಪಕರಾಗಿ ಹಾಗೂ ಪ್ರಭಾ ಶುಗರ್ಸ್‍ನ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದ ಎಸ್.ಎಂ.ರಂಜಣಗಿ ಮತ್ತು ಟಿಎಪಿಎಸ್‍ಎಂಎಸ್ ನಲ್ಲಿ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಐ.ಜಿ.ದಡ್ಡಿ ಅವರಿಗೆ ಶುಕ್ರವಾರದಂದು ಟಿಎಪಿಎಸ್‍ಎಂಎಸ್ ವತಿಯಿಂದ ಸನ್ಮಾನಿಸಿ ಬಿಳ್ಕೋಡಲಾಯಿತು.
ಈ ಸಂದರ್ಭದಲ್ಲಿ ಟಿಎಪಿಎಸ್‍ಎಂಎಸ್‍ನ ಅಧ್ಯಕ್ಷ ಬಿ.ಆರ್.ಪಾಟೀಲ (ನಾಗನೂರ), ನಿರ್ದೇಶಕರುಗಳಾದ ಅಶೋಕ ನಾಯ್ಕ, ಬಸುಗೌಡ ಪಾಟೀಲ, ಪ್ರಭಾರಿ ವ್ಯವಸ್ಥಾಪಕ ಎಚ್.ವೈ.ಐನಾಪೂರ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.