RNI NO. KARKAN/2006/27779|Wednesday, January 14, 2026
You are here: Home » breaking news » ಗೋಕಾಕ:ನಗರಸಭೆ ವಾರ್ಡ್‌ ಸಂಖ್ಯೆ 29ರಲ್ಲಿ ಪಕ್ಷೇತರ ಉಮೇದುವಾರ ಲಕ್ಷ್ಮೀ ದೇಶನೂರ ಭರದ ಪ್ರಚಾರ

ಗೋಕಾಕ:ನಗರಸಭೆ ವಾರ್ಡ್‌ ಸಂಖ್ಯೆ 29ರಲ್ಲಿ ಪಕ್ಷೇತರ ಉಮೇದುವಾರ ಲಕ್ಷ್ಮೀ ದೇಶನೂರ ಭರದ ಪ್ರಚಾರ 

ನಗರಸಭೆ ವಾರ್ಡ್‌ ಸಂಖ್ಯೆ 29ರಲ್ಲಿ ಪಕ್ಷೇತರ ಉಮೇದುವಾರ ಲಕ್ಷ್ಮೀ ದೇಶನೂರ ಭರದ ಪ್ರಚಾರ

ಗೋಕಾಕ ಅ 27 : ಶನಿವಾರ ನಗರಸಭೆ ವಾರ್ಡ್‌ ಸಂಖ್ಯೆ 29 ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರದಿಂದ ಪಕ್ಷೇತರ ಉಮೇದುವಾರರಾಗಿ ಸ್ಪರ್ಧಿಸಿರುವ ಲಕ್ಷ್ಮೀ ಬಸವರಾಜ ದೇಶನೂರ ಸೋಮವಾರ ಪೇಟೆಯ ಮನೆ–ಮನೆಗೆ ಚುನಾವಣಾ ಪ್ರಚಾರಾರ್ಥವಾಗಿ ತೆರಳಿ ಮತ ಯಾಚಿಸಿದರು.

ನಾಗರಿಕರ ಮೂಲ ಭೂತ ಸೌಲಭ್ಯಗಳನ್ನು ಆದ್ಯತೆ ಮೇರೆಗೆ ಒದಗಿಸುವುದೇ ನನ್ನ ಸ್ಪರ್ಧೆಯ ಮೂಲ ಧ್ಯೇಯವಾಗಿದೆ. ಬಹು ವರ್ಷಗಳಿಂದ ರಸ್ತೆ, ಚರಂಡಿ ಮತ್ತು 24 X 7 ನಿರಂತರ ಕುಡಿಯುವ ನೀರಿನ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದೇ ನನ್ನ ಸ್ಪರ್ಧೆಯ ಇನ್ನೊಂದು ಉದ್ದೇಶವಾಗಿದೆ ಎಂದು ನಗರಸಭೆ ವಾರ್ಡ್‌ ಸಂಖ್ಯೆ 29 ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿರುವ ಲಕ್ಷ್ಮೀ ಬಸವರಾಜ ದೇಶನೂರ ಮತದಾರರಲ್ಲಿ ಅರಿಕೆ ಮಾಡಿಕೊಂಡರು.
ಶನಿವಾರ ಇಲ್ಲಿಯ ವಾರ್ಡ್‌ ಸಂಖ್ಯೆ 29ರ ಭಾಗವಾಗಿರುವ ಸೋಮವಾರ ಪೇಟೆಯ ಪ್ರತಿ ಮನೆ–ಮನೆಗೆ ತೆರಳಿ ಮತಯಾಚಿಸಿದ ಅವರು, ಕುಡಿಯುವ ನೀರು ಪೂರೈಕೆ ವ್ಯವಸ್ಥೆಯನ್ನು ಇನ್ನಷ್ಟು ನಾಗರಿಕ ಪರ ಯೋಜನೆಯನ್ನಾಗಿಸುವ ದೆಶೆಯಲ್ಲಿ ಕಾರ್ಯ ನಿರ್ವಹಿಸುತ್ತೇನೆ ಎಂದು ಮತದಾರರಿಗೆ ಆಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ಬಸವರಾಜ ದೇಶನೂರ , ವಾರ್ಡನ ಪ್ರಮುಖರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: