RNI NO. KARKAN/2006/27779|Thursday, January 15, 2026
You are here: Home » breaking news » ಘಟಪ್ರಭಾ:ಕೊಡಗು ಹಾಗೂ ಕೇರಳ ಪ್ರವಾಹ ನಿರಾಶ್ರಿತರಿಗೆ ದೇಣಿಗೆ ಸಂಗ್ರಹ

ಘಟಪ್ರಭಾ:ಕೊಡಗು ಹಾಗೂ ಕೇರಳ ಪ್ರವಾಹ ನಿರಾಶ್ರಿತರಿಗೆ ದೇಣಿಗೆ ಸಂಗ್ರಹ 

ಕೊಡಗು ಹಾಗೂ ಕೇರಳ ಪ್ರವಾಹ ನಿರಾಶ್ರಿತರಿಗೆ ದೇಣಿಗೆ ಸಂಗ್ರಹ

ಘಟಪ್ರಭಾ ಅ 22 : ಸ್ಥಳೀಯ ರಾಷ್ಟ್ರೀಯ ಸ್ವಯಂ ಸೇವಕರಿಂದ ಮಂಗಳವಾರದಂದು ಕೊಡಗು ಹಾಗೂ ಕೇರಳ ಪ್ರವಾಹ ನಿರಾಶ್ರಿತರಿಗೆ ದೇಣಿಗೆ ಸಂಗ್ರಹಿಸಲಾಯಿತು.
ಘಟಪ್ರಭಾ ಮೃತ್ಯುಂಜಯ ವೃತ್ತದಿಂದ ಮಲ್ಲಾಪೂರ ಪಿ.ಜಿ. ವಿಠ್ಠಲ ದೇವಸ್ಥಾನದ ವರೆಗೆ ಎರಡು ಬದಿಗೆ ಇರುವ ಅಂಗಡಿ ಮುಗ್ಗಟ್ಟುಗಳಿಗೆ ಹೋಗಿ ಕಾಣಿಕೆ ಪೆಟ್ಟಿಗೆಯಲ್ಲಿ ಹಣ ಸಂಗ್ರಹಿಸಲಾಯಿತು. ಸಂಗ್ರಹವಾದ ಒಟ್ಟು 20,987 ರೂಪಾಯಿಗಳನ್ನು ರಾಷ್ಟ್ರೀಯ ಸ್ವಯಂ ಸಂಘ ಕೂಡಗು ಜಿಲ್ಲಾ ಸೇವಾ ಭಾರತಿ ಮಡಕೇರಿ ಸಂತ್ರಸ್ಥರ ಖಾತೆಗೆ ತಲುಪಿಸಲಾಯಿತು.
ಈ ಸಂಧರ್ಭದಲ್ಲಿ ಘಟಪ್ರಭಾ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾದ ಕಿರಣ ವಾಲಿ, ಸುರೇಶ ಪಾಟೀಲ, ಜಿ.ಎಸ್.ರಜಪೂತ, ಹರೀಶ ಕಾಳೆ, ಮಂಜುನಾಥ ವಾಕೋಡೆ, ಮಲ್ಲಪ್ಪ ಹುಕ್ಕೇರಿ, ನಾಗರಾಜ ಚೌಕಾಶಿ, ಶಿವುಕುಮಾರ ಕಮತೆ, ವೈಭವ ಕುಲಕರ್ಣಿ, ಬಸವರಾಜ ಬೆಳ್ಳನ್ನವರ, ಸೇರಿದಂತೆ ಅನೇಕರು ಇದ್ದರು.

Related posts: