RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಕೊಡಗು ಸಂತ್ರಸ್ತರಿಗೆ ಹಸಿರು ಸೇನೆಯಿಂದ ಅಭಯ ಹಸ್ತ

ಗೋಕಾಕ:ಕೊಡಗು ಸಂತ್ರಸ್ತರಿಗೆ ಹಸಿರು ಸೇನೆಯಿಂದ ಅಭಯ ಹಸ್ತ 

ಕೊಡಗು ಸಂತ್ರಸ್ತರಿಗೆ ಹಸಿರು ಸೇನೆಯಿಂದ ಅಭಯ ಹಸ್ತ

ಗೋಕಾಕ ಅ 20 : ರಾಜ್ಯದ ಕೊಡಗು ಹಾಗು ಮಡಿಕೇರಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಹಾನಿಯಾದ ಸಂತ್ರಸ್ತರಿಗೆ ಇಲ್ಲಿಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ವತಿಯಿಂದ ತಾಲೂಕಿನ ಸಾವಳಗಿ, ಖಾನಾಪೂರ ಸೇರಿದಂತೆ ಇತರ ಗ್ರಾಮಗಳಲ್ಲಿ ಸಂತ್ರಸ್ತರಿಗೆ ಆಹಾರ ಧ್ಯಾನ ಮತ್ತು ಆಹಾರ ಪಧಾರ್ಥಗಳನ್ನು ಸೋಮವಾರದಂದು ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ಆಹಾರ ಧ್ಯಾನದ ವಾಹನವನ್ನು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಯಿತು.
ಹದಿನೈದು ಸಾವಿರು ರೊಟ್ಟಿ, ಐವತ್ತು ಚೀಲ ಅಕ್ಕಿ, ಹತ್ತು ಚೀಲ ವಿವಿಧ ತರಹದ ಉಂಡಿಗಳನ್ನು ಮತ್ತು ಒಣ ಪದಾರ್ಥಗಳನ್ನು ಸಂಗ್ರಹಿಸಿ ನೆರೆಯ ಸಂತ್ರಸ್ತರಿಗೆ ಕಳುಹಿಸಿ ಕೊಡಲಾಯಿತು.
ಈ ಸಂದರ್ಭದಲ್ಲಿ ರೈತ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ ಪೂಜೇರಿ, ಸತ್ಯಪ್ಪ ಮಲ್ಲಾಪೂರೆ, ಸಿದ್ರಾಮ ಪೂಜೇರಿ, ಯಲ್ಲಪ್ಪ ತಿಗಡಿ, ಮಾರುತಿ ನಾಯ್ಕ, ಲಗಮಣ್ಣಾ ಕರಿಗಾರ, ಎಸ್.ಟಿ.ಕೊಟಬಾಗಿ, ಇರ್ಫಾನ್ ಜಮಾದಾರ, ಸಿದ್ಲಿಂಗ ಪೂಜೇರಿ, ಯಮನಪ್ಪ ನಾಯ್ಕರ ಸೇರಿದಂತೆ ಇತರರು ಇದ್ದರು.

Related posts: