RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ಅಂಗನವಾಡಿ ಕಳ್ಳತನ : ದುಪದಾಳ ಗ್ರಾಮದಲ್ಲಿ ಘಟನೆ

ಗೋಕಾಕ:ಅಂಗನವಾಡಿ ಕಳ್ಳತನ : ದುಪದಾಳ ಗ್ರಾಮದಲ್ಲಿ ಘಟನೆ 

ಅಂಗನವಾಡಿ ಕಳ್ಳತನ : ದುಪದಾಳ ಗ್ರಾಮದಲ್ಲಿ ಘಟನೆ
ಗೋಕಾಕ ಅ 13 : ಅಂಗನವಾಡಿಯಲ್ಲಿ ಆಹಾರ ಧಾನ್ಯಗಳನ್ನು ಕಳುವು ಮಾಡಿರುವ ಘಟನೆ ಗೋಕಾಕ ತಾಲೂಕಿನ ದುಪದಾಳ ಗ್ರಾಮದಲ್ಲಿ ರವಿವಾರ ಮಧ್ಯರಾತ್ರಿ ಸಂಭವಿಸಿದೆ

ದುಪದಾಳ ಗ್ರಾಮದ ಕೆ.ಆಯ್.ಡಿ ಕಾಲೋನಿಯಲ್ಲಿ ಅಂಗನವಾಡಿ ಕೇಂದ್ರದಲ್ಲಿ ರವಿವಾರ ಮದ್ಯರಾತ್ರಿ ಯಾರು ಇಲ್ಲದ ವೇಳೆ ಅಂಗನವಾಡಿ ಕಳವು ಮಾಡಿರುವ ಕಳ್ಳರು ಮಕ್ಕಳಿಗೆ ನೀಡುವ ಸಕ್ಕರೆ, ಗೋದಿ, ಕಡಲೇ ಕಾಳು, ಹಾಲಿನ ಪಾಕಿಟ ಹಾಗೂ ಅಡಿಗೆ ಸಾಮಾನುಗಳನ್ನು ಕಳವು ಮಾಡಿ ಫರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ

ಈ ಕುರಿತು ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಕಳುವು ಮಾಡಿದ ಆಪರಾಧಿಗಳನ್ನು ಕೂಡಲೇ ಬಂಧಿಸಬೇಕೆಂದು ಗ್ರಾಮಸ್ಥರು ಮತ್ತು ಕರವೇ ಕಾರ್ಯಕರ್ತರು ಆಗ್ರಹಿಸಿದ್ದಾರೆ

Related posts: