ಮೂಡಲಗಿ:ಮೂಡಲಗಿ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷರಾಗಿ ಡಾ. ಸುರೇಶ ಹನಗಂಡಿ ಆಯ್ಕೆ
ಮೂಡಲಗಿ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷರಾಗಿ
ಡಾ. ಸುರೇಶ ಹನಗಂಡಿ ಆಯ್ಕೆ
ಮೂಡಲಗಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೂಡಲಗಿ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಹಾಗೂ ಕಾರ್ಯದರ್ಶಿಯಾಗಿ ಮೂಡಲಗಿಯ ಪ್ರೊ. ಬಿ.ಎಲ್. ಮಾದಗೌಡರ ಅವರನ್ನು ಪರಿಷತ್ತಿನ ಜಿಲ್ಲಾಧ್ಯಕ್ಷ ಸಂಶೋಧಕ ಡಾ. ವಿ.ಎಸ್. ಮಾಳಿ ಅವರು ನೇಮಕಮಾಡಿದ್ದಾರೆ.
ಪದಾಧಿಕಾರಿಗಳು: ಬಾಲಶೇಖರ ಬಂದಿ (ಗೌ.ಅಧ್ಯಕ್ಷರು), ಸದಸ್ಯರಾಗಿ ಪ್ರೊ. ಬಿ.ಎ. ದೇಸಾಯಿ, ಪ್ರೊ.ಎಸ್.ಆರ್. ಮುದ್ದಾರ, ಬಸವರಾಜ ಕೋಟಿ, ಪ್ರೊ. ಸುರೇಶ ಲಂಕೆಪ್ಪನ್ನವರ, ಪ್ರೊ. ಮಹಾದೇವ ಪೋತರಾಜ, ರಮೇಶ ಕಲ್ಯಾಣಿ, ಮಹಾಂತೇಶ ಅಂದಾನಿ ಇವರನ್ನು ಡಾ. ಮಾಳಿ ಅವರು ನಾಮನಿರ್ದೇಶನ ಮಾಡಿದ್ದಾರೆ.