RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ಹಡಪದ ಅಪ್ಪಣ್ಣನವರು ವಿಶ್ವಗುರು ಬಸವಣ್ಣನವರ ಆಪ್ತರಾಗಿದ್ದರು : ಲಕ್ಷ್ಮಣ ಚಂದರಗಿ

ಗೋಕಾಕ:ಹಡಪದ ಅಪ್ಪಣ್ಣನವರು ವಿಶ್ವಗುರು ಬಸವಣ್ಣನವರ ಆಪ್ತರಾಗಿದ್ದರು : ಲಕ್ಷ್ಮಣ ಚಂದರಗಿ 

ಹಡಪದ ಅಪ್ಪಣ್ಣನವರು ವಿಶ್ವಗುರು ಬಸವಣ್ಣನವರ ಆಪ್ತರಾಗಿದ್ದರು : ಲಕ್ಷ್ಮಣ ಚಂದರಗಿ

ಬೆಟಗೇರಿ ಜು 27 : ಹನ್ನೇರಡನೇಯ ಶತಮಾನದ ಬಸವಾದಿ ಪ್ರಮಥರ ಜೋತೆಯಲ್ಲಿದ್ದ ಶಿವಶರಣ ಹಡಪದ ಅಪ್ಪಣ್ಣನವರು ವಿಶ್ವಗುರು ಬಸವಣ್ಣನವರ ಆಪ್ತರಾಗಿದ್ದರು. ಇವರ ಬದುಕಿನ ತತ್ವದಾರ್ಶಗಳನ್ನು ಇಂದು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಹೇಳಿದರು.
ಗ್ರಾಮದ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಶುಕ್ರವಾರ ಜುಲೈ.27 ರಂದು ನಡೆದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಿವಶರಣ ಅಪ್ಪಣ್ಣನವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದರು.
ಇಲ್ಲಿಯ ಯುವ ಧುರೀಣ ಮಲ್ಲಪ್ಪ ಪಣದಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶಿವಶರಣ ಹಡಪದ ಅಪ್ಪಣ್ಣನವರ ಬದುಕು, ಬರಹದ ಕುರಿತು ಮಾತನಾಡಿದರು. ಶಿವಶರಣ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಸಿಹಿ ವಿತರಿಸಲಾಯಿತು.
ಸ್ಥಳೀಯ ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ, ಸುರೇಶ ಬಾಣಸಿ, ಅಜ್ಜಪ್ಪ ಪೇದನ್ನವರ, ವಿಠಲ ಚಂದರಗಿ, ಪುಂಡಲೀಕಪ್ಪ ನಾವಿ, ಸಿದ್ಧಾರೂಢ ಹಡಪದ, ಬೀರಪ್ಪ ಕುರಬೇಟ, ಉದ್ದಪ್ಪ ಆಶೆಪ್ಪಗೋಳ ಸೇರಿದಂತೆ ಗ್ರಾಪಂ ಸದಸ್ಯರು, ಸಿಬ್ಬಂದಿ ವರ್ಗ, ಇತರರು ಇದ್ದರು.

Related posts: