ಗೋಕಾಕ:ದಿ .11ರಿಂದ ಎರೆಡು ದಿನಗಳ ಕಾಲ ಸಿದ್ದಾರ್ಥ ಕಾಲೇಜಿನಲ್ಲಿ ಪೇಂಟಿಂಗ್ಸ ಪ್ರದರ್ಶನ
ದಿ .11ರಿಂದ ಎರೆಡು ದಿನಗಳ ಕಾಲ ಸಿದ್ದಾರ್ಥ ಕಾಲೇಜಿನಲ್ಲಿ ಪೇಂಟಿಂಗ್ಸ ಪ್ರದರ್ಶನ
ಗೋಕಾಕ ಜು 9: ಸ್ಥಳೀಯ ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ನೆರವಿನಿಂದ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದಲ್ಲಿ ದಿನಾಂಕ 11 ಹಾಗೂ12 ರಂದು ಎರಡು ದಿನಗಳ ಕಾಲ ಕಬ್ಬೂರದ ವಿಜಯಕುಮಾರ ನಾಯಿಕ . ಗೋಕಾಕದ ಮಲ್ಲಮ್ಮ ದಳವಾಯಿ ಹಾಗೂ ಝಂಗಟಿಹಾಳದ ಆನಂದ ಮಗದುಮ್ಮ ಇವರ ಪೇಂಟಿಂಗ್ಸಗಳ ಪ್ರದರ್ಶನ ಜರುಗಲಿದೆ ದಿ|| 11 ರಂದು ಬೆಳ್ಳಿಗ್ಗೆ 10-30 ಗಂಟೆಗೆ ಪ್ರದರ್ಶನವನ್ನು ಬೆಳಗಾವಿಯ ಆರ್ಟ ಅಪೇರ್ಸ ಇಂಗ್ಲೀಷ ಆರ್ಟ ಮ್ಯಾಗಜಿನ ಸಂಪಾದಕ ಹಾಗೂ ಕಲಾವಿದರಾದ ವಿಶ್ವನಾಥ ಗುಗ್ಗರಿ ಪ್ರದರ್ಶನ ಉದ್ಘಾಟಿಸಲಿದು, ಗೋಕಾಕದ ಹಿರಿಯ ಚಿತ್ರಕಲಾವಿದ ಶಂಕರ ಮುಂಗರವಾಡಿ ರಾಯಬಾಗ ವಿವೇಕಾನಂದ ಕಲಾ ಮಂದಿರದÀ ಉಪನ್ಯಾಸಕ ಪ್ರಕಾಶ ಪತ್ತಾರ, ಸಾಹಿತಿ ಹಾಗೂ ಕಲಾವಿದ ಜಯಾನಂದ ಮಾದರ ಮತ್ತು ಚಿತ್ರಕಲಾ ಶಿಕ್ಷಕ ಸದಾನಂದ ಗಾಯಕವಾಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿಡಕಲ್ ಡ್ಯಾಂನ ಕೆ.ಆರ್.ಇ.ಸೊಸೈಟಿಯ ಚೇರ್ಮನ್ ಬಸವರಾಜ ಕಡಕಭಾವಿ ಅಧ್ಯಕ್ಷತೆ ವಹಿಸಲಿದ್ದು ಮರಡಿಮಠದ ಯುವ ಚಿತ್ರಕಲಾವಿದ ಬಸವರಾಜ ಗದಗಿನ ಹಾಗೂ ಬೆಳಗಾವಿಯ ರೋಹಿಣಿ ಹೊನಗೇಕರ ಇವರನ್ನು ಸತ್ಕರಿಸಲಾಗುವುದು ಈ ಕಲಾ ಪ್ರದರ್ಶನಕ್ಕೆ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
