RNI NO. KARKAN/2006/27779|Wednesday, October 15, 2025
You are here: Home » breaking news » ಸವದತ್ತಿ:ಎಪಿಎಂಸಿ ಗೋದಾಮಿನಲ್ಲಿ ಅಗ್ನಿ ಅವಘಡ

ಸವದತ್ತಿ:ಎಪಿಎಂಸಿ ಗೋದಾಮಿನಲ್ಲಿ ಅಗ್ನಿ ಅವಘಡ 

ಎಪಿಎಂಸಿ ಗೋದಾಮಿನಲ್ಲಿ ಅಗ್ನಿ ಅವಘಡ
ಸವದತ್ತಿ ಜೂ 19 : ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಎಪಿಎಂಸಿ ಗೋದಾಮಿಗೆ ಆಕಸ್ಮಿಕ ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ . ಅಶೋಕ್ ಕಾಟನಗೆ ಸೇರಿದ್ದ , ಗೋದಾಮು ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದು ಬಂದಿದೆ
ಬೆಂಕಿ ಕೆನ್ನಾಲಿಗೆಗೆ ಗೋದಾಮಿನಲ್ಲಿದ್ದ ಅಪಾರ ಪ್ರಮಾಣದ ಹತ್ತಿ, ಗೋವಿನಜೋಳˌ ಕಡಲೆ ಸುಟ್ಟು ಭಸ್ಮವಾಗಿವೆ. 1000 ಕ್ವಿಂಟಾಲ್ ಹತ್ತಿ, 500 ಕ್ವಿಂಟಾಲ್‌ ಗೋವಿನ ಜೋಳˌ ಕಡಲೆ 20 ಕ್ವಿಂಟಾಲ್ ಸುಟ್ಟು ಕರಕಲಾಗಿವೆ. 

ಅಗ್ನಿ ಅವಘಡದಿಂದ ಸುಮಾರು 50 ಲಕ್ಷ ರೂ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Related posts: