ಅಳ್ನಾವರದಲ್ಲಿ ಬಿಜೆಪಿ ಕಾರ್ಯಕರ್ತನಿಂದ ಇಸ್ಲಾಂ ಧರ್ಮಕ್ಕೆ ಅವಮಾನ:
ಅಳ್ನಾವರದಲ್ಲಿ ಬಿಜೆಪಿ ಕಾರ್ಯಕರ್ತನಿಂದ ಇಸ್ಲಾಂ ಧರ್ಮಕ್ಕೆ ಅವಮಾನ:
ಖಾನಾಪುರ ಮೇ 31: ಅಳ್ನಾವರ ಪಟ್ಟಣದಲ್ಲಿ ಮಂಗಳವಾರ ತಡರಾತ್ರಿ ವೆಂಕಟೇಶ ಜಳಗೆಕರ ಎಂಬ ಬಿಜೆಪಿ ಕಾರ್ಯಕರ್ತ ತನ್ನ ವಾಟ್ಸಪ್ ಅಲ್ಲಿ “ಮೆಕ್ಕಾ” (ಕಾಬಾಶರೀಫ) ಮೇಲೆ ಹನುಮಂತನ ಭಾವಚಿತ್ರವನ್ನು ಹಚ್ಚಿ, ಕೋಮುವಾದ ಸ್ರಷ್ಟಿಸಲು ಯತ್ನಿಸಿದ್ದಾನೆ, ಜೋತೆಗೆ ತನ್ನ ವಾಟ್ಸಪ್ ಗೆ ಡಿಪಿ ಇಟ್ಟಿದ್ದಾನೆ ಹಾಗೂ ಅದೆ ಫೊಟೊವನ್ನು ತನ್ನ ಸ್ನೇಹಿತರಿಗೂ ಕಳುಹಿಸಿದ್ದಾನೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಅಳ್ನಾವರ ಪೋಲಿಸ್ ಠಾಣೆಗೆ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಯುವಕರು ಭೇಟಿ ನೀಡಿ ಆತನನ್ನು ಬಂಧಿಸಲು ಒತ್ತಾಯಿಸಿದ್ದಾರೆ.
ಆದರೆ ಕೃತ್ಯ ಎಸಗಿದ ಬಿಜೆಪಿ ಕಾರ್ಯಕರ್ತ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ.
ಬುಧವಾರ ಬೇಳಗಾಗಿತ್ತಿದ್ದಂತ್ತೆಯೇ ಅಪಾರ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಜನರು ಅಳ್ನಾವರ ಪೊಲೀಸ್ ಠಾಣೆ ಎದುರುಗಡೆ ಜಮಾಯಿಸಿದ್ದು, ಆತನನ್ನು ಬಂಧಿಸಬೇಕೆಂದು ಹಠಹಿಡಿದಿದ್ದಾರೆ.
ಜೋತೆಗೆ ಆತನನ್ನು ಬಂಧಿಸುವರೆಗೂ ಠಾಣೆ ಬಿಟ್ಟು ಹೋಗುವುದಿಲ್ಲ ಎಂದು ಹಠ ಹಿಡಿದಿದ್ದಾರೆ.