ಬೆಳಗಾವಿ :ಬೆಂಜ್ ಕಾರಿಗೆ ಬೆಂಕಿ ಇಟ್ಟ ಕಿಡಗೇಡಿಗಳು

ಬೆಂಜ್ ಕಾರಿಗೆ ಬೆಂಕಿ ಇಟ್ಟ ಕಿಡಗೇಡಿಗಳು
ಬೆಳಗಾವಿ ಜೂ 3 : ಬೆಂಜ್ ಕಾರಿಗೆ ಬೆಂಕಿ ಇಟ್ಟ ಘಟನೆ ನಿನ್ನೆ ರಾತ್ರಿ ಶಿವಾಜಿ ನಗರದ ಜೈನ ಹೌಸಿಂಗ ಕೌಲನಿಯ ರಸ್ತೆಯಲ್ಲಿ ನಡೆದಿದೆ
ರಾತ್ರಿ 3 ಘಂಟೆ ಸುಮಾರಿಗೆ ಘಟನೆ ನಡೆದಿದ್ದು, ಕಿಡಿಗೇಡಿಗಳ ಕೃತ್ಯಕ್ಕೆ ಸಾರ್ವಜನಿಕರು ಭಯಭೀತಗೊಂಡಿದ್ದಾರೆ.
ಬೆಂಕಿಯಿಂದಾಗಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
