RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ: ಧೂಪದಾಳ ಗ್ರಾಮದಲ್ಲಿ ರಾಣಾಪ್ರತಾಪ್ ಸಿಂಹರ ಜಯಂತಿ ಆಚರಣೆ

ಗೋಕಾಕ: ಧೂಪದಾಳ ಗ್ರಾಮದಲ್ಲಿ ರಾಣಾಪ್ರತಾಪ್ ಸಿಂಹರ ಜಯಂತಿ ಆಚರಣೆ 

ಧೂಪದಾಳ ಗ್ರಾಮದಲ್ಲಿ ರಾಣಾಪ್ರತಾಪ್ ಸಿಂಹರ 477 ನೇ ಜಯಂತಿ ಆಚರಣೆ

 

ಘಟಪ್ರಭಾ ಮೇ 28: ಗೋಕಾಕ ತಾಲೂಕಿನ ಧೂಪದಾಳ ಗ್ರಾಮದ ರಜಪೂತ ಸೇವಾ ಸಮಿತಿಯ ಆಶ್ರಯದಲ್ಲಿ ಮಹಾರಾಜ ರಾಣಾಪ್ರತಾಪ್ ಸಿಂಹರ 477 ನೇಯ ಜಯಂತಿಯನ್ನು ವಿಜ್ರಂಭನೆಯಿಂದ ಆಚರಿಸಲಾಯಿತು.

ಇಂದು ನಡೆದ ಜಯಂತಿಯನ್ನು ಕರ್ಪೂರಮಠ ಸ್ವಾಮೀಜಿ ರಾಣಾಪ್ರತಾಪ್ ಸಿಂಹರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಬೈಕ್ ಜಾಥಾ ಹಮ್ಮಿಕೊಂಡು, ಮಹಾಪ್ರಸಾದ ಜರುಗಿತು.

ಸಂಜೆ 4 ಗಂಟೆಗೆ ಮಹಾರಾಣಾ ಪ್ರತಾಪ್‌ ಸಿಂಹ ಭಾವಚಿತ್ರದ ಮೆರವಣಿಗೆಗೆ ಸಮಿತಿ ಉಪಾಧ್ಯಕ್ಷರಾದ ಭರ್ಮಸಿಂಗ ಚಾಲನೆ ನೀಡಿದರು. ಮೆರವಣಿಗೆಯು ಜಾನಪದ ಕಲಾಮೇಳದೊಂದಿಗೆ ಲಕ್ಷ್ಮೀದೇವರ ಗುಡಿಯವರೆಗೆ ಹೋಗಿ ಪ್ರಮುಖ ಬೀದಿಗಳಲ್ಲಿ ಹಾಯ್ದು ಕಾರ್ಯಾಲಯ ತಲುಪಿತು. 

ರಜಪೂತ ಸಮಾಜದ ಬಾಂಧವರುಹಾಗೂ ಮಹಿಳಾ ಸಂಘದವರು ಉಪಸ್ಥಿತರಿದ್ದರು

Related posts: