RNI NO. KARKAN/2006/27779|Wednesday, October 15, 2025
You are here: Home » breaking news » ಬೆಳಗಾವಿ: ದೊಡ್ಡ ಪರದೆಯ ಮೇಲೆ ಐಪಿಎಲ್ ನೇರ ಪ್ರಸಾರ

ಬೆಳಗಾವಿ: ದೊಡ್ಡ ಪರದೆಯ ಮೇಲೆ ಐಪಿಎಲ್ ನೇರ ಪ್ರಸಾರ 

ಬೆಳಗಾವಿಯಲ್ಲಿ ದೊಡ್ಡ ಪರದೆಯ ಮೇಲೆ ಐಪಿಎಲ್ ನೇರ ಪ್ರಸಾರ

ಬೆಳಗಾವಿ ಮೇ 22 : ಐಪಿಎಲ್ 11 ನೇ ಆವೃತ್ತಿ ಕ್ವಾಲಿಫೈಯರ ಹಂತ ತಲುಪಿದ್ದು , ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಕುಂದಾ ನಗರಿಯ ಕ್ರಿಕೆಟ್ ಪ್ರೇಮಿಗಳಿಗೆ ಚುಟುಕು ಪಂದ್ಯದ ಕಿಕ್ಕ ಕೊಡಲು ಬಿಸಿಸಿಐ ಬೆಳಗಾವಿಯ ಜಿಮ್ಖಾನ ಮೈದಾನದಲ್ಲಿ ಪ್ಯಾನಪಾರ್ಕ ನಿರ್ಮಿಸಿದೆ

ಐಪಿಎಲ್ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ ಹಾಗೂ ವಿಲಿಯಮ್ಸನ್‌ ಸಾರಥ್ಯದ ಸನ್ ರೈಸರ್ ಹೈದರಾಬಾದ್ ತಂಡಗಳು ಸೆಣಸಾಟ ನಡೆಸಲಿವೆ. ಹೈವೋಲ್ಟೇಜ್ ಎಂದೇ ಹೇಳಲಾಗುತ್ತಿರುವ ಈ ಪಂದ್ಯವನ್ನು ಬೃಹತ್ ಪರದೆಯ ಮೇಲೆ ವೀಕ್ಷಿಸುವ ಅವಕಾಶ ಕುಂದಾ ನಗರಿಯ ಕ್ರಿಕೆಟ್ ರಸಿಕರಿಗೆ ದೊರೆತಿದೆ. ಇಂದು ಸಂಜೆ 8ಕ್ಕೆ ಆರಂಭವಾಗಲಿರುವ ಈ ಪಂದ್ಯ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಇದೆ. 
ಈ ಸಲ ಕಪ್ ನಮ್ಮದೇ ಎಂಬ ಭರವಸೆಯೊಂದಿಗೆ ಕಣಕ್ಕಿಳಿದಿದ್ದ ಆತಿಥೇಯ ರಾಯಲ್ ಚಾಲೇಂಜರ್ಸ್ ತಂಡ ಟೂರ್ನಿಯಿಂದ ಹೊರ ಬಿದ್ದಿದೆ. ಆತಿಥೇಯ ತಂಡದ ಹೊಡಿ ಬಡಿ ಆಟ ಬೃಹತ್ ಪರದೆಯ ಮೇಲೆ ಕಣ್ತುಂಬಿಕೊಳ್ಳುವ ಅವಕಾಶ ಬೆಳಗಾವಿಗರಿಗಿಲ್ಲ. ಆದರೂ ಎರಡೂ ಬಲಿಷ್ಠ ತಂಡಗಳ ಕ್ವಾಲಿಫೈಯರ್ ಪಂದ್ಯ ವೀಕ್ಷಿಸಲು ಕುಂದಾ ನಗರಿಯ ಕ್ರಿಕೆಟ್ ರಸಿಕರು ಕಾತರರಾಗಿದ್ದಾರೆ. 
ಇಷ್ಟು ದಿನ ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಐಪಿಎಲ್ ಪಂದ್ಯ ವೀಕ್ಷಿಸಿದ್ದ ಕ್ರಿಕೆಟ್ ಪ್ರೇಮಿಗಳು ಇಂದು ಸ್ನೇಹಿತರೊಟ್ಟಿಗೆ ಆಗಮಿಸಿ ಫ್ಯಾನ್‍ ಪಾರ್ಕ್‍ನ ಬೃಹತ್ ಪರದೆಯ ಮೇಲೆ ಪಂದ್ಯ ವೀಕ್ಷಿಸಬಹುದು. ಸ್ನೇಹಿತರೊಂದಿಗೆ ಜಂಟಿಯಾಗಿ ಮೈದಾನಕ್ಕೆ ಆಗಮಿಸಿ ಐಪಿಎಲ್ ಕಿಕ್‍ನ ರಂಜನೆ ಪಡೆಯಬಹುದು. ಉತ್ತರ ಕರ್ನಾಟಕದ ಭಾಗಗಳಾದ ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಮಾತ್ರ ಈವರೆಗೆ ಬಿಸಿಸಿಐ ಪ್ರತಿ ವರ್ಷ ಫ್ಯಾನ್‍ ಪಾರ್ಕ್‍ನ ವ್ಯವಸ್ಥೆ ಕಲ್ಪಿಸುತ್ತಿದ್ದು, ಇದಕ್ಕೆ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಲ್ಲಿ 5 ಸಾವಿರ ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. 
ಏನಿದು ಫ್ಯಾನ್‍ ಪಾರ್ಕ್?
ವಿಶ್ವದಲ್ಲೇ ಸಂಚಲನ ಮೂಡಿಸಿರುವ ಹಾಗೂ ಖ್ಯಾತಿ ಪಡೆದಿರುವ ಇಂಡಿಯನ್ ಪ್ರೀಮಿಯರ್‌ ಲೀಗ್ ಟೂರ್ನಿಯ ಪ್ರಮೋಷನ್‍ಗಾಗಿ ಬಿಸಿಸಿಐ ಪ್ರತಿವರ್ಷವೂ ಆಯ್ದ ಮಹಾನಗರಗಳಲ್ಲಿ ಫ್ಯಾನ್‍ ಪಾರ್ಕ್ ನಿರ್ಮಿಸುತ್ತಿದೆ. ಫ್ಯಾನ್‍ ಪಾರ್ಕ್ ಪರದೆ 30 ಅಡಿ ಅಗಲ ಹಾಗೂ 23 ಅಡಿ ಎತ್ತರದಷ್ಟು ಬೃಹತ್ ಆಗಿರುತ್ತದೆ. ಹೀಗಾಗಿ ಫ್ಯಾನ್‍ ಪಾರ್ಕ್‍ನ ಬೃಹತ್ ಪರದೆ ಮೇಲೆ ವೀಕ್ಷಿಸುವ ಪಂದ್ಯಗಳು ಮೈದಾನದಲ್ಲಿ ವೀಕ್ಷಿಸಿದ ಅನುಭವ ದೊರೆಯುತ್ತದೆ. 

Related posts: