ಗೋಕಾಕ:ಸಚಿವ ರಮೇಶ ಪರ ಮಗ ಅಮರನಾಥ ಭರ್ಜರಿ ಪ್ರಚಾರ

ಸಚಿವ ರಮೇಶ ಪರ ಮಗ ಅಮರನಾಥ ಭರ್ಜರಿ ಪ್ರಚಾರ
ಗೋಕಾಕ ಏ 28 : ಸಚಿವ ರಮೇಶ ಜಾರಕಿಹೊಳಿ ಅವರ ಪರ ಅವರ ಕಿರಿಯ ಮಗ ಅಮರನಾಥ ಜಾರಕಿಹೊಳಿ ಅವರು ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ
ಇಂದು ತಾಲೂಕಿನ ಹಣಮಾಪೂರ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪರ ಮತಯಾಚನೆ ಮಾಡಿ ಕಾಂಗ್ರೇಸ ಸರಕಾರ ಮತ್ತು ತಂದೆ ಸಚಿವ ರಮೇಶ ಜಾರಕಿಹೊಳಿ ಅವರು ಮಾಡಿದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ಕಾಂಗ್ರೇಸ ಸರಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ತಮ್ಮ ಅಮೂಲ್ಯ ಮತಗಳನ್ನು ಕಾಂಗ್ರೇಸ ಪಕ್ಷಕ್ಕೆ ನೀಡಿಬೇಕೆಂದು ಮನವಿ ಮಾಡಿದರು
ಪ್ರಚಾರ ಸಂಬಂಧ ಗ್ರಾಮಕ್ಕೆ ಆಗಮಿಸಿದ ಅಮರನಾಥ ಅವರಿಗೆ ಗ್ರಾಮದ ಮಹಿಳೆಯರಿಂದ ಆರತಿ ಮಾಡಿ ಅದ್ದೂರಿಯಿಗಿ ಸ್ವಾಗತ ಕೋರಲಾಯಿತು
ಜಿ.ಪಂ ಸದ್ಯಸ ತುಕಾರಾಮ ಕಾಗಲ್ , ಪ್ರಕಾಶ ತೋಳಿನವರ , ಶಿವಪುತ್ರ ದುರದುಂಡಿ , ಹಣಮಂತ ಪುರಂದರೆ , ಭರಮಪ ಬಾನಸಿ, ಮಾರುತಿ ಬಾಂವಿಹಾಳ, ಬಸಪ ದರಮಟ್ಟಿ , ಭೀಮಶಿ ಕೇತನ್ನವರ ಕೆಂಚಪ ಬಾದನ್ನವರ, ಮಾರುತಿ ಬುಮನ್ನವರ , ಲಕ್ಷ್ಮಣ ಸನದಿ , ನಿಂಗಪ್ಪ ಬಾನಸಿ , ಶಿವರಾಯ ಸನದಿ ಸೇರಿದಂತೆ ಅನೇಕ ಹಿರಿಯರು , ಮಹಿಳೆಯರು ಯುವಕರು ಬಾಗವಹಿಸಿದರು