ಬೆಳಗಾವಿ: ಮಹಾ ಸಚಿವರಿಗೆ ಬೆಳಗಾವಿ ಗಡಿ ಪ್ರವೇಶ ನಿಷೇಧಿಸಿ : ಡಿಸಿ ಎನ್.ಜಯರಾಮ ಆದೇಶ
ಮಹಾ ಸಚಿವರಿಗೆ ಬೆಳಗಾವಿ ಗಡಿ ಪ್ರವೇಶ ನಿಷೇಧಿಸಿ : ಡಿಸಿ ಎನ್.ಜಯರಾಮ ಆದೇಶ
ಬೆಳಗಾವಿ ಮೇ 24: ಮಹಾರಾಷ್ಟ್ರ ಸರ್ಕಾರದ ಶಿವಸೇನೆಯ ಇಬ್ಬರು ನಾಡವಿರೋಧಿ ಸಚಿವರು ಬೆಳಗಾವಿಗೆ ಆಗಮಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿರುವ ಹಿನ್ನಲೆಯಲ್ಲಿ ಮಹಾ ಸಚಿವರು ಬೆಳಗಾವಿ ಗಡಿ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎನ್ ಜಯರಾಂ ಆದೇಶ ಹೊರಡಿಸಿದ್ದಾರೆ
ಮಹಾರಾಷ್ಟ್ರ ಕ್ಯಾಬಿನೇಟ್ ಆರೋಗ್ಯ ಸಚಿವ ದಿಪಕ ಸಾವಂತ ಮತ್ತು ಸಾರಿಗೆ ಸಚಿವ ದಿವಾಕರ ರಾವಠೆ ಅವರು ಬೆಳಗಾವಿ ಗಡಿ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎನ್ ಜಯರಾಂ ಆದೇಶ ಹೊರಡಿಸಿದ್ದಾರೆ.
ಇದರಿಂದ ಎಂಇಎಸ್ ನಾಯಕರಿಗೆ ಸದ್ಯದ ಮಟ್ಟಿಗೆ ಹಿನ್ನಡೆಯಾಗಿದೆ