RNI NO. KARKAN/2006/27779|Wednesday, March 18, 2026
You are here: Home » breaking news » ಗೋಕಾಕ:ಬಿಜೆಪಿ ನಗರ ಘಟಕದ ಅಧ್ಯಕ್ಷರ ವಿರುದ್ಧ ದೂರು

ಗೋಕಾಕ:ಬಿಜೆಪಿ ನಗರ ಘಟಕದ ಅಧ್ಯಕ್ಷರ ವಿರುದ್ಧ ದೂರು 

ಬಿಜೆಪಿ ನಗರ ಘಟಕದ ಅಧ್ಯಕ್ಷರ ವಿರುದ್ಧ ದೂರು

ಗೋಕಾಕ ಏ 4 : ಬಿಜೆಪಿ ಅಲ್ಪಸಂಖ್ಯಾತರ ರಾಜ್ಯ ಘಟಕದ ಸದಸ್ಯನ ಮೇಲೆ ಹಲ್ಲೆ ನಂತರ ಮಂಗಳವಾರದಂದು ಪ್ರತಿದೂರು ದಾಖಲಾಗಿದ್ದು ಬಿಜೆಪಿ ನಗರ ಘಟಕದ ಅಧ್ಯಕ್ಷ ಶಶಿಧರ ದೇಮಶೆಟ್ಟಿ ಹಾಗೂ ಶಕೀಲ ಧಾರವಾಡಕರ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.
ಸೋಮವಾರದಂದು ಸಂಜೆ ಕೋರ್ಟ ಆವರಣದಲ್ಲಿ ನಡೆದ ಘಟನೆ ಸಂಬಂಧವಾಗಿ ಪ್ರತಿದೂರು ದಾಖಲಾಗಿದ್ದು ಪ್ರಕಾಶ ಮಹಾದೇವ ಭಾಗೋಜಿ ಈತನು ಘಟಪ್ರಭಾದ ಕೆಎಚ್‍ಐ ಆಸ್ಪತ್ರೆಯಿಂದ ಗೋಕಾಕ ನಗರ ಪೋಲೀಸ ಠಾಣೆಗೆ ದೂರು ನೀಡಿ ಬಿಜೆಪಿ ಮುಖಂಡ ಶಶಿಧರ ದೇಮಶೆಟ್ಟಿ ಹಾಗೂ ಶಕೀಲ ಧಾರವಾಡಕರ ಇಬ್ಬರೂ ಸೇರಿ ತನ್ನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದರೆಂದು ಗಾಯಗೊಂಡಿರುವ ತಾನು ಉಪಚಾರಕ್ಕೆ ಕೆಎಚ್‍ಐ ಆಸ್ಪತ್ರೆಗೆ ದಾಖಲಾಗಿರುವದಾಗಿ ದೂರಿನಲ್ಲಿ ತಿಳಿಸಿದ್ದಾನೆ.
ಈ ಬಗ್ಗೆ ನಗರ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.

Related posts: