ಘಟಪ್ರಭಾ:ಮಾರ್ಚ 18 ರಿಂದ 20 ರವರೆಗೆ ಶ್ರೀ ದುರದುಂಡೀಶ್ವರ ಮಹಾಶಿವಯೋಗಿಗಳವರ ಜಾತ್ರೆ ಮಹೋತ್ಸವ

ಮಾರ್ಚ 18 ರಿಂದ 20 ರವರೆಗೆ ಶ್ರೀ ದುರದುಂಡೀಶ್ವರ ಮಹಾಶಿವಯೋಗಿಗಳವರ ಜಾತ್ರೆ ಮಹೋತ್ಸವ
ಘಟಪ್ರಭಾ ಮಾ 16 : ಸಮೀಪದ ಅರಭಾಂವಿ ಮಠದ ಶ್ರೀ ದುರದುಂಡೀಶ್ವರ ಮಹಾಶಿವಯೋಗಿಗಳವರ ಯಾತ್ರಾ ಮಹೋತ್ಸವವು ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಮಾರ್ಚ 18 ರಿಂದ 20 ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ದಿ.18 ರಂದು ಬೆಳಿಗ್ಗೆ 8-00 ಗಂಟೆಗೆ ಷಟ್‍ಸ್ಥಲ ಧ್ವಜಾರೋಹಣ ಹಾಗೂ ಯುಗಾದಿ ಪಾಡ್ಯೆ ಪಂಚಾಂಗ ಶ್ರವಣ ಕಾರ್ಯಕ್ರಮ ಹಾಗೂ ಬೆಳಿಗ್ಗೆ 9-00 ಗಂಟೆಗೆ ಹಿಟ್ಟಣಿಯ ಶ್ರೀ ಪ್ರಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳಿಂದ ಅಯ್ಯಾಚಾರ ದೀಕ್ಷಾ ಕಾರ್ಯಕ್ರಮ ನೆರೆವೇರುವುದು.
ದಿ.19 ರಂದು ಬೆಳಿಗ್ಗೆ 6-00 ಕ್ಕೆ ಕರ್ತೃ ಶ್ರೀ ದುರದುಂಡೀಶ್ವರ ಗದ್ದುಗೆಗೆ ಮಾಹಾ ರುದ್ರಾಭಿಷೇಕ ಹಾಗೂ ಮಧ್ಯಾಹ್ನ 12 ಗಂಟೆಗೆ ನಾಡಿನ ಸರ್ವ ಸದ್ಭಕ್ತರಿಂದ ಪಲ್ಲಕ್ಕಿ ಮಹೋತ್ಸವ ಜರಗುವುದು. ಸಂಜೆ 4-00 ಗಂಟೆಗೆ ರಾಜ್ಯ ಮಟ್ಟದ ಕುಸ್ತಿ ಪ್ರದರ್ಶನ ಜರುಗಲಿವೆ.
ಸಂಜೆ 6-00 ಗಂಟೆಗೆ ಶ್ರೀ ಸಿದ್ಧರಾಮ ಮಹಾಸ್ವಾಮಿಗಳು ರುದ್ರಾಕ್ಷಿಮಠ ನಾಗನೂರು ಬೆಳಗಾವಿ ಅವರ ಪಾವನ ಸಾನಿದ್ಯದಲ್ಲಿ ಧರ್ಮ ಚಿಂತನ ಗೋಷ್ಠಿ ನಡೆಯಲಿದ್ದು, ಗೊಷ್ಠಿಯ ನೇತೃತ್ವವನ್ನು ಕಡಕೋಳ ವಿರಕ್ತಮಠದ ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳು, ಅಧ್ಯಕ್ಷತೆಯನ್ನು ಹಂದಿಗುಂದ-ಆಡಿ ವಿರಕ್ತಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು ವಹಿಸಲಿದ್ದಾರೆ. ಕಡೋಲಿ ವಿರಕ್ತಮಠದ ಶ್ರೀ ಗುರುಬಸವಲಿಂಗ ಮಹಾಸ್ವಾಮಿಗಳು, ಹುಕ್ಕೇರಿ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು, ಶೇಗುಣಸಿ ವಿರಕ್ತಮಠದ ಶ್ರೀ ಮಹಾಂತ ದೇವರು, ಉಪಸ್ಥಿತರಿರುವರು.
ಬೆಂಗಳೂರಿನ ಲಿಂ. ಶಿವಕುಮಾರ ಈ. ಕೊಳವಿ ಇವರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ವಿತರಿಸಲಾವುದು.
ದಿ.20 ರಂದು ಬೆಳಿಗ್ಗೆ 8-00 ಗಂಟೆಯಿಂದ ವಿವಿಧ ಪ್ರಕಾರದ ಶರ್ತುಗಳು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.