ಬೆಳಗಾವಿ:ದೇಶದ ಅತೀ ಎತ್ತರದ ರಾಷ್ಟ್ರ ಧ್ವಜಸ್ಥಂಭ ಸಚಿವ ರಮೇಶ ಜಾರಕಿಹೊಳಿ ಅವರಿಂದ ಲೋಕಾರ್ಪಣೆ

ದೇಶದ ಅತೀ ಎತ್ತರದ ರಾಷ್ಟ್ರ ಧ್ವಜಸ್ಥಂಭ ಸಚಿವ ರಮೇಶ ಜಾರಕಿಹೊಳಿ ಅವರಿಂದ ಲೋಕಾರ್ಪಣೆ
ಬೆಳಗಾವಿ ಮಾ 12: ಭಾರತದ ಅತೀ ಎತ್ತರದ ರಾಷ್ಟ್ರ ಧ್ವಜಸ್ಥಂಭ ನಗರದಲ್ಲಿ ಇಂದು ಲೋಕಾರ್ಪಣೆಗೊಂಡಿದೆ.
ಸೋಮವಾರದಂದು ಮುಂಜಾನೆ ನಗರದ ಕೋಟೆ ಕೆರೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತು ಶಾಸಕ ಫೀರೋಜ ಸೇಠ್ ಧ್ವಜ ಸ್ಥಂಭ ಲೋಕಾರ್ಪಣೆ ಮಾಡಿದರು
ಅಳತೆ:
110 ಮೀಟರ್ ಎತ್ತರದ ರಾಷ್ಟ್ರ ಧ್ವಜಸ್ಥಂಭ ಇದಾಗಿದ್ದು, ಧ್ವಜ ಸ್ಥಂಭದ ವ್ಯಾಸದ ಕೆಳಭಾಗ 1.90 ಮೀಟರ್, ಮೇಲ್ಭಾಗ 0.60 ಮೀಟರ್ ಇದೆ.
ಈ ಧ್ವಜಸ್ಥಂಭ ಒಟ್ಟು 9600 ಚದರ ಅಡಿ ಅಳತೆ ಹೊಂದಿದೆ. ಇದರ ಭಾರ 500 ಕೆಜಿ ಆಗಿದೆ. 1ಕೋಟಿ 62 ಲಕ್ಷ ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಇನ್ನು 24 ಗಂಟೆಗಳ ಕಾಲ ಇದರ ಮೇಲೆ ರಾಷ್ಟ್ರ ಧ್ವಜ ಹಾರಾಡಲಿದೆ
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ , ಬ್ರಿಗೇಡಿಯರ ಗೊಂವಿದ ಕಲವಾಡ, ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ , ಮೇಯರ ಬಸಪ್ಪ ಚಿಕ್ಕಲದಿನ್ನಿ , ಸಿಇಓ ಆರ್.ರಾಮಚಂದ್ರನ , ಡಿಸಿಪಿಗಳಾದ ಸೀಮಾ ಲಾಟಕ್ಕರ , ಮಹಾನಿಂಗ ನಂದಗಾಂವಿ , ಬುಡಾ ಆಯುಕ್ತ ಶಕೀಲ ಅಹ್ಮದ್ , ಜಿ.ಪಂ ಅಧ್ಯಕ್ಷೆ ಆಶಾ ಐಹೋಳೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು