ಗೋಕಾಕ:ದೇವಾಲಯಗಳ ಜೀರ್ಣೋದ್ಧಾರಕ್ಕೆ ಮಂಜೂರಾದ ಸಹಾಯ ಧನದ ಚೆಕ್ಕವಿತರಣೆ
ದೇವಾಲಯಗಳ ಜೀರ್ಣೋದ್ಧಾರಕ್ಕೆ ಮಂಜೂರಾದ ಸಹಾಯ ಧನದ ಚೆಕ್ಕವಿತರಣೆ
ಗೋಕಾಕ ಮಾ, 7 ;- ಮುಜರಾಯಿ ಇಲಾಖೆಯಿಂದ ಗೋಕಾಕ ಮತಕ್ಷೇತ್ರದ ದೇವಾಲಯಗಳ ಜೀರ್ಣೋದ್ಧಾರಕ್ಕೆ ಮಂಜೂರಾದ ಸಹಾಯ ಧನದ ಚೆಕ್ಕಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಂಗಳವಾರದಂದು ನಗರದ ತಮ್ಮ ಕಾರ್ಯಾಲಯದಲ್ಲಿ ವಿತರಿಸಿದರು.
ಗೋಕಾಕ ಮತಕ್ಷೇತ್ರದ ಶಿಂಧಿಕುರಬೇಟ ಗ್ರಾಮದ ಅಂಭಾಭವಾನಿ ದೇವಸ್ಥಾನಕ್ಕೆ 9 ಲಕ್ಷ ರೂ, ಹಣಮಾಪೂರದ ಮರಡಿ ಸಿದ್ಧೇಶ್ವರ ಗುಡಿಗೆ 10 ಲಕ್ಷ ರೂ, ಬೆಣಚಿನಮರಡಿ ಬೀರಸಿದ್ಧೇಶ್ವರ ಗುಡಿಗೆ 10 ಲಕ್ಷ ರೂ, ಗಳ ಚೆಕ್ಕಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯರಾದ ಟಿ.ಆರ್.ಕಾಗಲ್, ಮಡ್ಡೆಪ್ಪ ತೋಳಿನವರ, ತಹಶೀಲ್ದಾರ ಜಿ.ಆರ್.ಮಳಗಿ, ದೇವಸ್ಥಾನ ಕಮೀಟಿಯ ಲಕ್ಕಪ್ಪ ಮಳಗಿ, ವಿಠ್ಠಲ ಗುಂಡಿ, ಸಿದ್ದಪ್ಪ ರಂಗನ್ನವರ, ಮುತ್ತೆಪ್ಪ ಬೀರನಗಡ್ಡಿ, ನಿಂಗಪ್ಪ ಬಂಬರವಾಡಿ, ಮಾರುತಿ ಜಾಧವ ಸೇರಿದಂತೆ ಅನೇಕರು ಇದ್ದರು.