RNI NO. KARKAN/2006/27779|Sunday, July 13, 2025
You are here: Home » breaking news » ಬೆಳಗಾವಿ:ಜಾರಕಿಹೊಳಿ ಸಹೋದರ ತಿಕ್ಕಾಟಕ್ಕೆ ಬೇಕ್ರ್ ಹಾಕುವರೇ ರಾಹುಲ್ ಗಾಂಧಿ ?

ಬೆಳಗಾವಿ:ಜಾರಕಿಹೊಳಿ ಸಹೋದರ ತಿಕ್ಕಾಟಕ್ಕೆ ಬೇಕ್ರ್ ಹಾಕುವರೇ ರಾಹುಲ್ ಗಾಂಧಿ ? 

ಜಾರಕಿಹೊಳಿ ಸಹೋದರ ತಿಕ್ಕಾಟಕ್ಕೆ ಬೇಕ್ರ್ ಹಾಕುವರೇ ರಾಹುಲ್ ಗಾಂಧಿ ?

ಬೆಳಗಾವಿ ಫೆ 23: ಎಐಸಿಸಿ ಅಧ್ಯಕ್ಷ ರಾಹುಲ ಗಾಂಧಿ ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ರಾಜಕೀಯ ಚಟುವಟಿಕೆಗಳು ಗರಿಗೇದರಿವೆ .

ಜಿಲ್ಲೆಯ ಪ್ರಮುಖ ರಾಜಕೀಯ ನಾಯಕರು ನಾ ಮುಂದೆ , ತಾ ಮುಂದೆ ಎಂದು ರಾಹುಲ ಕಾರ್ಯಕ್ರಮಕ್ಕೆ ಸಕಲ ರೀತಿಯ ತಯಾರಿ ನಡೆಸುತ್ತಿದ್ದಾರೆ

ರಾಹುಲ್‌ ಆಗಮನ ಕೈ ಕಾರ್ಯಕರ್ತರಲ್ಲಿ ಭರವಸೆ ಮೂಡಿಸಿದೆ. ಜಾರಕಿಹೊಳಿ ಸಹೋದರರ ವೈಮನಸ್ಸಿಗೆ ರಾಹುಲ್ ಬ್ರೇಕ್ ಹಾಕುವರೇ ಎಂಬ ಪ್ರಶ್ನೆ ಕೈ ನಾಯಕರನ್ನು ಕಾಡುತ್ತಿದೆ. ಅದಕ್ಕಾಗಿ ರಾಹುಲ್ ಅವರು ಜಾರಕಿಹೊಳಿ ಸಹೋದರರನ್ನು ಪ್ರತ್ಯೇಕವಾಗಿ ಕರೆಯಿಸಿ ಇಬ್ಬರ ಮಧ್ಯದಲ್ಲಿ ಸಂಧಾನ ನಡೆಸುವ ಸಾಧ್ಯತೆಯಿದೆ ಎಂದು ರಾಜಕೀಯ ಮೂಲಗಳಿಂದ ತಿಳಿದು ಬಂದಿದೆ. 

ರಾಜ್ಯದಲ್ಲಿ ಅತಿ ದೊಡ್ಡ ಜಿಲ್ಲೆ ಬೆಳಗಾವಿಯಾಗಿದೆ. 18 ವಿಧಾನಸಭಾ ಕ್ಷೇತ್ರಗಳಿವೆ. ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲಲು ರಣತಂತ್ರ ರೂಪಿಸಿದೆ. ಈಗಾಗಲೇ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಧನಾ ಸಮಾವೇಶ ನಡೆಸಿ ಹೋಗಿದ್ದಾರೆ. 

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬರುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಯಮಕನಮರಡಿ, ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕರಿದ್ದಾರೆ. ಇನ್ನು ರಾಯಬಾಗ, ಕಾಗವಾಡ, ಕುಡಚಿ, ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವಿಗೆ ರಣತಂತ್ರ ರೂಪಿಸಿದೆ. ಅದಕ್ಕಾಗಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲೂ ರಾಹುಲ್‌ ಗಾಂಧಿ ಕಾರ್ಯಕ್ರಮ ನಿಗದಿಯಾಗಿದೆ. 

ಎಲ್ಲಕ್ಕಿಂತ ಮುಖ್ಯವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಹಾಗೂ ಅವರ ಸಹೋದರ ಲಖನ್‌ ಜಾರಕಿಹೊಳಿ ಅವರ ಕದನಕ್ಕೆ ರಾಹುಲ್‌ ಅವರು ಬ್ರೇಕ್ ಹಾಕುವ ಸಾಧ್ಯತೆಯಿದೆ. ಹೀಗಾಗಿ ರಾಹುಲ್‌ ಆಗಮನ ಕೈಪಡೆ ಕಾರ್ಯಕರ್ತರಲ್ಲಿ ಹುಮಸ್ಸು ಮೂಡಿಸಿದೆ.

Related posts: