ಗೋಕಾಕ:ಮಹಾದಾಯಿ ವಿವಾದ: ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹಿಸಿ ಗೋಕಾದಲ್ಲಿ ಪ್ರತಿಭಟನೆ
ಮಹಾದಾಯಿ ವಿವಾದ: ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹಿಸಿ ಗೋಕಾದಲ್ಲಿ ಪ್ರತಿಭಟನೆ
ಗೋಕಾಕ ಫೆ 4: ಸುಮಾರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕಳಸಾ ಬಂಡೂರಿ ನಾಲಾ ಜೋಡನೆ ಕಾಮಗಾರಿಯನ್ನು ಪೂರ್ಣಗೋಳಿಸಿ ಕರ್ನಾಟಕಕ್ಕೆ ನ್ಯಾಯದೊರಕಿಸಲು ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿ ನಗರದಲ್ಲಿ ರಾಜ್ಯ ರೈತ ಸಂಘ ಮತ್ತು ಕರವೇ ಸ್ವಾಭಿಮಾನಿ ಬಣದ ಕಾರ್ಯರ್ತರು ಪ್ರತಿಭಟನೆ ನಡೆಯಿಸಿದರು
ರವಿವಾರದಂದು ಮುಂಜಾನೆ ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಕಾರ್ಯರ್ತರು ಕೈಗೆ ಕಪ್ಪು ಬಟ್ಟೆ ತೊಟ್ಟು ರಸ್ತೆ ತಡೆ ನಡೆಯಿಸಿದರು
ಬಿಜಿಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಇಂದು ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರು ಮಹಾದಾಯಿ ವಿಚಾರವಾಗಿ ತಮ್ಮ ನಿಲುವನ್ನು ಸ್ವಷ್ಠ ಪಡಿಸಿ ಕರ್ನಾಟಕ ರೈತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಕೊಡಿಹಳ್ಳಿ ಬಣದ ಜಿಲ್ಲಾ ಸಂಚಾಲಕ ಗಣಪತಿ ಇಳಿಗೇರ , ಸ್ವಾಭಿಮಾನಿ ಬಣದ ಸಂತೋಷ ಖಂಡ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು