RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ಮುಸ್ಲಿಂ ಸಮಾಜ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ: ಎಸ್.ಎ.ಕೊತವಾಲ್

ಗೋಕಾಕ:ಮುಸ್ಲಿಂ ಸಮಾಜ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ: ಎಸ್.ಎ.ಕೊತವಾಲ್ 

ಮುಸ್ಲಿಂ ಸಮಾಜ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ: ಎಸ್.ಎ.ಕೊತವಾಲ್

ಗೋಕಾಕ ಜ, 28 ;- ಶೈಕ್ಷಣಿಕವಾಗಿ ಮುಸ್ಲಿಂ ಸಮಾಜ ಹಿಂದುಳಿದ್ದು, ಸಮಾಜ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ, ತಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ಉಜ್ವಲಗೊಳಿಸುವಂತೆ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಸ್.ಎ.ಕೊತವಾಲ್ ಹೇಳಿದರು.
ಅವರು, ಶನಿವಾರದಂದು ನಗರದ ಅಲ್‍ಫಲ್ಹಾ ಮೈನಾರಿಟಿ ಏಜ್ಯುಕೇಶನ್ ಚಾರಿಟೇಬಲ್ ಆ್ಯಂಡ್ ವೆಲಫೇರ್ ಸೊಸೈಟಿಯ ಕ್ರಿಸೆಂಟ್ ಆಂಗ್ಲ ಹಾಗೂ ಉರ್ದು ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೆಳನ ಹಾಗೂ ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಸಮಾಜ ಬಾಂಧವರು ತಮ್ಮ ಮಕ್ಕಲಿಗೆ ಶಿಕ್ಷಣ ಕೊಡಿಸಿ ಅವರ ಭüವಿಷ್ಯವನ್ನು ಉಜ್ವಲಗೊಳಿಸಿ ಸಮಾಜದ ಅಭಿವೃದ್ಧಿಗೂ ಶ್ರಮಿಸಬೇಕೆಂದ ಅವರು, ಖಾಸಗೀ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಕಠೀಣ ದಿನಗಳಲ್ಲಿ ಯುವಕರು ಸಂಘಟಿತರಾಗಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ಶೈಕ್ಷಣಿಕ ಪ್ರಗತಿಗೆ ಸ್ರಮಿಸುತ್ತಿರುವುದು ಮಾದರಿಯಾಗಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ, ಜಿಇಎಸ್ ವಿಶ್ವಸ್ಥ ಮಂಡಳಿ ಅಧ್ಯಕ್ಷ ಜಿ.ಬಿ.ತಾಂವಶಿ, ಗಣ್ಯರಾದ ಮೋಶಿನ ಖೋಜಾ, ಎಮ್.ಆರ್.ಖಾನ್, ಪ್ರಮೋದ ಜೋಶಿ, ಮಲ್ಲೀಕ ಪೈಲ್ವಾನ, ಶ್ರವಣ ಮನ್ನಿಕೇರಿ, ಡಾ. ಉಮೇಶ ನಿಪ್ಪಾಣಿ, ನಗರಸಭೆ ಸದಸ್ಯರಾದ ಕುತುಬುದೀನ ಗೋಕಾಕ, ಶಹಬಾಷಖಾನ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಜೀರ ಶೇಖ, ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಗುಲಾಬಸಾಬ ಮಕಾಂದರ, ಅಧ್ಯಕ್ಷ ನಜೀರ್‍ಅಹಮ್ಮದ ಪೈಲ್ವಾನ, ಪದಾಧಿಕಾರಿಗಳಾದ ಮುನ್ನಾ ನಡುಗಡ್ಡೆ, ಇಸ್ಮಾಯಿಲ್ ಮುಕಾಶಿ, ಶಫೀವುಲ್ಲಾ ಗವಟಿ, ಅಬ್ದುಲ್‍ಖಾದರ ಫಿರಜಾದೆ, ಫಿರಾಜಿ ರಾಜಗೋಳಿ, ಜುಬೇರಹಮ್ಮದ ಪಟೇಲ, ಇಮ್ರಾನ ಕಾಲೇಬಾಯಿ, ಮಹ್ಮದಶೇಖ ಮುಲ್ಲಾ, ಅಬ್ದುಲ್‍ಕರೀಮ ಚಟ್ನಿ ಇದ್ದರು.

Related posts: