ಗೋಕಾಕ:ಹಿಂದಿನ ಕಾಲದಲ್ಲಿ ಭಾರತೀಯ ಶಿಕ್ಷಣ ಪದ್ಧತಿಯನ್ನು ಇಡೀ ಜಗತ್ತು ಶ್ಲಾಘಿಸುತ್ತಿತ್ತು: ವಿಶ್ವನಾಥ ಯಮಕನಮರ್ಡಿ
ಹಿಂದಿನ ಕಾಲದಲ್ಲಿ ಭಾರತೀಯ ಶಿಕ್ಷಣ ಪದ್ಧತಿಯನ್ನು ಇಡೀ ಜಗತ್ತು ಶ್ಲಾಘಿಸುತ್ತಿತ್ತು: ವಿಶ್ವನಾಥ ಯಮಕನಮರ್ಡಿ
ಗೋಕಾಕ ಜ, 25 : ಹಿಂದಿನ ಕಾಲದಲ್ಲಿ ಭಾರತೀಯ ಶಿಕ್ಷಣ ಪದ್ಧತಿಯನ್ನು ಇಡೀ ಜಗತ್ತು ಶ್ಲಾಘಿಸುತ್ತಿತ್ತು. ಆದರೆ ಇಂದಿನ 21ನೇ ಶತಮಾನದಲ್ಲಿ ತಾಂತ್ರಿಕತೆಯ ಪರಿಪೂರ್ಣ ಶಿಕ್ಷಣದ ಅವಶ್ಯಕವಾಗಿದೆ ಎಂದು ನೂತನವಾಗಿ ನ್ಯಾಯಾಧೀಶರಾಗಿ ಆಯ್ಕೆಗೊಂಡ ವಿಶ್ವನಾಥ ಯಮಕನಮರ್ಡಿ ಹೇಳಿದರು.
ಅವರು ಬುಧವಾರದಂದು ರಾತ್ರಿ ನಗರದ ನೇಚರ್ ಎಜ್ಯುಕೇಶನ್ ಫೌಂಡೇಶನ್‍ದ ವಿದ್ಯಾನಿಕೇತನ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದಿನ ಮಕ್ಕಳಲ್ಲಿ ಪ್ರತಿಭೆ ಸಾಕಷ್ಟು ಇದೆ. ಆದರೆ ಅದನ್ನು ಶಿಕ್ಷಕರು ಮತ್ತು ಪಾಲಕರು ಗುರುತಿಸಿ ಪ್ರೋತ್ಸಾಹಿಸಬೇಕು. ಮನೆಯಲ್ಲಿ ಪಾಲಕರು ಮಕ್ಕಳಿಗೆ ಅವಶ್ಯಕ ಶಿಕ್ಷಣ ಮತ್ತು ಸಂಸ್ಕಾರ ನೀಡಬೇಕೆಂದು ಹೇಳಿದ ಅವರು ಶಿಕ್ಷಣದಿಂದ ದೇಶ ಬಲಿಷ್ಠವಾಗುವದು ಸಾಧ್ಯ. ಜಗತ್ತಿನ ಹಲವಾರು ದೇಶಗಳು ಶಿಕ್ಷಣದಿಂದಲೇ ಅಭಿವೃದ್ಧಿ ಸಾಧಿಸಿವೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕಾ ವೈದ್ಯಾಧಿಕಾರಿ ಡಾ. ಆರ್.ಎಸ್.ಬೆಣಚಿನಮರಡಿ ಅವರು ಮಾತನಾಡಿ ಸಾಧನೆಗೆ ಆರೋಗ್ಯ ಬಹುಮುಖ್ಯ. ಪಾಲಕರು ತಮ್ಮ ಮಕ್ಕಳ ದೈಹಿಕ, ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕೆಂದು ತಿಳಿಸಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎಲ್.ಟಿ.ತಪಶಿ ವಹಿಸಿದ್ದರು.
ವೇದಿಕೆ ಮೇಲೆ ಸಂಸ್ಥೆಯ ಕಾರ್ಯದರ್ಶಿ ಐ.ಎಸ್.ಶೀಗಿಹಳ್ಳಿ, ಸಹಕಾರ್ಯದರ್ಶಿ ಎಸ್.ಡಿ.ಜಾಧವ, ಮುಖ್ಯಾಧ್ಯಾಪಕಿ ಆರ್.ಆರ್. ಗಾಣಿಗೇರ ಇದ್ದರು.
ಶಿಕ್ಷಕಿ ಕವಿತಾ ರವರಂಗಿ ಸ್ವಾಗತಿಸಿದರು. ಸೀಮಾ ಹಳಕಟ್ಟಿ ಹಾಗೂ ಸಾವಿತ್ರಿ ನಿರ್ವಾಣಿ ನಿರೂಪಿಸಿದರು. ನೀಲಮ್ಮ ಕುಂಬಾರ ವಂದಿಸಿದರು.
ನಂತರ ಮಕ್ಕಳಿಂದ ಸಾಂಸ್ಕಂತಿಕ ಕಾರ್ಯಕ್ರಮಗಳು ಜರುಗಿದವು.