RNI NO. KARKAN/2006/27779|Wednesday, October 15, 2025
You are here: Home » breaking news » ಬೆಳಗಾವಿ:ಖಡಕ್ ಅಧಿಕಾರಿ ಸುಧೀರಕುಮಾರ ರೆಡ್ಡಿ ಅಧಿಕಾರ ಸ್ವೀಕಾರ

ಬೆಳಗಾವಿ:ಖಡಕ್ ಅಧಿಕಾರಿ ಸುಧೀರಕುಮಾರ ರೆಡ್ಡಿ ಅಧಿಕಾರ ಸ್ವೀಕಾರ 

ಖಡಕ್ ಅಧಿಕಾರಿ ಸುಧೀರಕುಮಾರ ರೆಡ್ಡಿ ಅಧಿಕಾರ ಸ್ವೀಕಾರ

ಬೆಳಗಾವಿ ಜ 23: ದಕ್ಷಿಣ ಕನ್ನಡ ಎಸ್ಪಿ ಆಗಿ ಕಾರ್ಯನಿರ್ವಹಿಸಿದ ಸುಧೀರ್ ಕುಮಾರ್ ರೆಡ್ಡಿ ಅವರು ಮಂಗಳವಾರದಂದು ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು

ಬೆಳಗಾವಿಯ ಜಿಲ್ಲೆಯ ನೂತನ ಎಸ್ಪಿಯಾಗಿ  ರಾಜ್ಯ ಸರ್ಕಾರ ಜ. 20 ರಂದು ಆದೇಶವನ್ನು ಹೊರಡಿಸಿತ್ತು.

ಮೂಲ ಆಂಧ್ರ ಪ್ರದೇಶದ ರಾಜ್ಯದವರಾಗಿರುವ  ಸುಧೀರ್ ಕುಮಾರ್ ರೆಡ್ಡಿ ಅವರು 2010 ನೇ ಸಾಲಿನ ಐಪಿಎಸ್ ಅಧಿಕಾರಿಯಾಗಿದ್ದಾರೆ. 

2014 ರಿಂದ ಸುಧೀರ್ಘ ಅವದಿಗೆ  ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ  ಕಾರ್ಯನಿರ್ವಹಿಸಿದ  ಡಾ. ಬಿ.ಆರ್. ರವಿಕಾಂತೇ ಗೌಡ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

ಮರಳು ಮಾಫಿಯಾ ವಿರುದ್ದ ಧ್ವನಿ ಎತ್ತಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಕೇವಲ 6 ತಿಂಗಳಲ್ಲಿಯೇ ಜನ ಮನ ಗೆದ್ದು , ಅಪರಾದಿಗಳಿಗೆ ‌ಸಿಂಹಸ್ವಪ್ನವಾಗಿದ ಸುಧೀರಕುಮಾರ ರೆಡ್ಡಿ ಅವರು ಬೆಳಗಾವಿ ಜಿಲ್ಲೆಯ ನೂತನ ಎಸ್ ಪಿ ಯಾಗಿ ಅಧಿಕಾರ ಸ್ವೀಕರಿಸಿರುವುದು ಜಿಲ್ಲೆಯಲ್ಲಿಯ ಸಮಾಜುಘಾತುಕ ಶಕ್ತಿಗಳಲ್ಲಿ ಆತಂಕ ಸೃಷ್ಟಿಸಿದೆ

Related posts: