RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ರಡ್ಡಿ ಸಮುದಾಯದ ಅನುಕೂಲಕ್ಕಾಗಿ ಯಾದವಾಡದಲ್ಲಿ 10 ಎಕರೆ ಜಮೀನು ಮಂಜೂರು ಮಾಡಿಸಲಿಗುವುದು : ಶಾಸಕ ಬಾಲಚಂದ್ರ

ಗೋಕಾಕ:ರಡ್ಡಿ ಸಮುದಾಯದ ಅನುಕೂಲಕ್ಕಾಗಿ ಯಾದವಾಡದಲ್ಲಿ 10 ಎಕರೆ ಜಮೀನು ಮಂಜೂರು ಮಾಡಿಸಲಿಗುವುದು : ಶಾಸಕ ಬಾಲಚಂದ್ರ 

ರಡ್ಡಿ ಸಮುದಾಯದ ಅನುಕೂಲಕ್ಕಾಗಿ ಯಾದವಾಡದಲ್ಲಿ 10 ಎಕರೆ ಜಮೀನು ಮಂಜೂರು ಮಾಡಿಸಲಿಗುವುದು : ಶಾಸಕ ಬಾಲಚಂದ್ರ

ಗೋಕಾಕ ಜ 19: ರಡ್ಡಿ ಸಮುದಾಯದ ಅನುಕೂಲಕ್ಕಾಗಿ ಯಾದವಾಡದಲ್ಲಿ 10 ಎಕರೆ ಜಮೀನು ಮಂಜೂರು ಮಾಡಿಸುವುದಾಗಿ ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಗರದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಶುಕ್ರವಾರದಂದು ತಾಲೂಕಾ ಆಡಳಿತ ಹಾಗೂ ತಾಲೂಕಾ ವೇಮನ ಸಮಾಜ ಜಂಟಿಯಾಗಿ ಏರ್ಪಡಿಸಿದ್ದ ಮಹಾಯೋಗಿ ವೇಮನ 606ನೇ ಜಯಂತಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥಾನ ಮಠವು ಹೇಮ-ವೇಮ ಸದ್ಬೋಧನ ವಿದ್ಯಾಪೀಠವನ್ನು ಯಾದವಾಡದಲ್ಲಿ ಆರಂಭಿಸಲಿದೆ. ಎರೇಹೊಸಹಳ್ಳಿಯ ಮಹಾಯೋಗಿ ವೇಮನ ಸಂಸ್ಥಾನ ಮಠದ ಜಗದ್ಗುರುಗಳಿಗೆ ಈ ಜಮೀನನ್ನು ಹಸ್ತಾಂತರ ಮಾಡಲಾಗುವುದು ಎಂದು ಹೇಳಿದರು

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಗರದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಶುಕ್ರವಾರದಂದು ಜರುಗಿದ ಮಹಾಯೋಗಿ ವೇಮನ 606ನೇ ಜಯಂತಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವುದು

ತಾವು ಗಳಿಸಿರುವ ಸಂಪತ್ತನ್ನು ಸ್ವಲ್ಪವಾದರೂ ಸಮಾಜದಲ್ಲಿರುವ ಕಡುಬಡವರಿಗೆ ದಾನ ಮಾಡಿದರೆ ಅದೊಂದು ಪವಿತ್ರ ಕಾರ್ಯವಾಗುತ್ತದೆ. ಕೇವಲ ಆಸ್ತಿ ಗಳಿಸಿದರೆ ಸಾಲದು. ಸ್ವಲ್ಪವಾದರೂ ಸಮಾಜಕ್ಕೆ ಅನುಕೂಲವಾಗಬೇಕು. ಸಂಪದ್ಬರಿತ ಸಮಾಜವಾಗಿರುವ ರಡ್ಡಿ ಸಮಾಜ ಬಾಂಧವರು ಸಮಾಜದ ಒಳತಿಗಾಗಿ ದಾನ ಮಾಡಲು ಮುಂದೆ ಬರುವಂತೆ ಕೋರಿಕೊಂಡರು. ದಾನ ಮಾಡಿದರೆ ಖಜಾನೆ ಖಾಲಿಯಾಗುವುದಿಲ್ಲ. ಬದಲಿಗೆ ಖಜಾನೆ ವೃದ್ಧಿಯಾಗುತ್ತದೆ. ಇದರಿಂದ ನಮಗೆ ಸುಖ-ಶಾಂತಿ-ನೆಮ್ಮದಿ ಹಾಗೂ ಸಮೃದ್ಧಿ ಬದುಕುವಾಗುವುದು ಎಂದು ಭಗವದ್ಗೀತೆ, ಖುರಾಣ, ಬೈಬಲ್ ಮುಂತಾದ ಗ್ರಂಥಗಳು ಸಾರಿವೆ ಎಂದು ಹೇಳಿದರು.


ವೇಮನರ ತತ್ವದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ವೇಮನ ಜಗತ್ತಿನ ಬೆಳಕು ಇದ್ದಂತೆ. ಸ್ವಚ್ಛ-ಶುದ್ಧ ಕ್ರಾಂತಿ ಪುರುಷ. ಸಮಾಜದ ಕಾಯಕದ ಘನತೆ, ಗೃಹಸ್ಥ ಧರ್ಮ, ಅಹಿಂಸೆಯ ಅನುಸರಣೆ, ಧಾರ್ಮಿಕ ದರ್ಶನ, ತತ್ವ ಜಿಜ್ಞಾಸೆಯನ್ನು ವೇಮನರು ತಮ್ಮ ಪದ್ಯಗಳಲ್ಲಿ ಪ್ರತಿಪಾದಿಸಿದ್ದಾರೆ. ಬಸವಣ್ಣನವರಂತೆ ವೇಮನರು ಕೂಡ ಕಾಯಕದ ಘನತೆಯನ್ನು ಘಂಟಾಘೋಷವಾಗಿ ಸಾರಿಸಾರಿ ಹೇಳಿದ್ದಾರೆ. ಪ್ರತಿಯೊಬ್ಬರೂ ಯಾವುದಾದರೊಂದು ಪ್ರಾಮಾಣಿಕವಾದ ವೃತ್ತಿಯಲ್ಲಿ ತೊಡಗಿರಬೇಕೆಂದು ಎಚ್ಚರಿಸಿದ್ದಾರೆ. ಕೂಡಿ ಹಾಕದೇ ಬದುಕುವ ಸೋಮಾರಿಯೇ ನಿಜವಾದ ಬಡವನೆಂದು ಹೇಳಿದ್ದಾರೆ. ಇಂತಹ ಮಹಾನ್ ಪುರುಷರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಡ್ಡಿ ಸಮಾಜ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಶಿಕ್ಷಣದ ಪ್ರಗತಿಗೆ ಶ್ರಮಿಸುವಂತೆ ಬಾಂಧವರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಕರೆ ನೀಡಿದರು.
ದಿವ್ಯ ಸಾನಿಧ್ಯವನ್ನು ಸ್ಥಳೀಯ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ವಿಶೇಷ ಉಪನ್ಯಾಸಕರಾಗಿ ಹೊಸಯರಗುದ್ರಿಯ ಸಿದ್ಧಪ್ರಭು ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಹುಬ್ಬಳ್ಳಿ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಆಯುಕ್ತ ಜಿ.ಬಿ. ಗೌಡಪ್ಪನವರ ಆಗಮಿಸಿದ್ದರು.
ವೇದಿಕೆಯಲ್ಲಿ ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ರಡ್ಡಿ ಸಮಾಜದ ಹಿರಿಯರಾದ ಪಾಂಡಪ್ಪ ಚನ್ನಾಳ, ನಿಂಗಪ್ಪಗೌಡ ನಾಡಗೌಡ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ತಾಪಂ ಉಪಾಧ್ಯಕ್ಷ ಯಲ್ಲಪ್ಪ ನಾಯಿಕ, ನಗರಸಭೆ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜತ್ತಿ, ಮೂಡಲಗಿ ಪುರಸಭೆ ಉಪಾಧ್ಯಕ್ಷ ರವೀಂದ್ರ ಸೋನವಾಲ್ಕರ, ಟಿಎಪಿಸಿಎಂಎಸ್ ನಿರ್ದೇಶಕ ಅಶೋಕ ನಾಯಿಕ, ಪ್ರಭಾಶುಗರ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ಡಿ.ಬಿ. ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಹನಮಂತ ಕೊಪ್ಪದ, ಈರಣ್ಣಾ ಜಾಲಿಬೇರಿ, ನ್ಯಾಯವಾದಿ ಕೆ.ಟಿ. ಉದಪುಡಿ, ಬಿ.ಎಚ್. ಪಾಟೀಲ, ಪರ್ವತಗೌಡ ಪಾಟೀಲ, ಸುನೀಲ ಪಂಚಗಾಂವಿ, ಕಲ್ಲಪ್ಪ ಲಕ್ಕಾರ, ಗಿರೀಶ ನಾಡಗೌಡ, ಸುಭಾಸ ವಂಟಗೋಡಿ, ತಹಶೀಲ್ದಾರ ಜಿ.ಎಸ್. ಮಳಗಿ, ಮುಂತಾದವರು ಉಪಸ್ಥಿತರಿದ್ದರು. ಶಿವು ಪಾಟೀಲ ಸ್ವಾಗತಿಸಿದರು. ಸತ್ತೆಪ್ಪ ನಾಯಿಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರ ವೃತ್ತದಿಂದ ಲಕ್ಷ್ಮೀದೇವರ ಪಾದಗಟ್ಟಿ ರಸ್ತೆ ಮೂಲಕ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪಕ್ಕೆ ಮೆರವಣಿಗೆ ಆಗಮಿಸಿತು.

Related posts: