RNI NO. KARKAN/2006/27779|Tuesday, August 5, 2025
You are here: Home » breaking news » ಗೋಕಾಕ:ಅರ್ಹ ಬಡ ಕುಟುಂಬಗಳಿಗೆ ಮನೆಗಳು ಮಂಜೂರು : ಡಾ.ರಾಜೇಂದ್ರ ಸಣ್ಣಕ್ಕಿ

ಗೋಕಾಕ:ಅರ್ಹ ಬಡ ಕುಟುಂಬಗಳಿಗೆ ಮನೆಗಳು ಮಂಜೂರು : ಡಾ.ರಾಜೇಂದ್ರ ಸಣ್ಣಕ್ಕಿ 

ಅರ್ಹ ಬಡ ಕುಟುಂಬಗಳಿಗೆ ಮನೆಗಳು ಮಂಜೂರು : ಡಾ.ರಾಜೇಂದ್ರ ಸಣ್ಣಕ್ಕಿ

ಗೋಕಾಕ ಜ 19: ಮೆಳವಂಕಿ ಜಿಪಂ ಕ್ಷೇತ್ರಕ್ಕೆ 200 ಹಾಗೂ ಕೌಜಲಗಿ ಗ್ರಾಮ ಪಂಚಾಯತಿಗೆ 100 ಮನೆಗಳು ಮಂಜೂರಾಗಿವೆ ಎಂದು ರಾಜ್ಯ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಗುರುವಾರದಂದು ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಬಸವ ವಸತಿ ಯೋಜನೆಯಡಿ ಮಂಜೂರಾದ ಮನೆಗಳ ಆದೇಶ ಪತ್ರಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ಅರ್ಹ ಬಡ ಕುಟುಂಬಗಳನ್ನು ಗುರುತಿಸಿ ಪ್ರಾಮಾಣಿಕವಾಗಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಮೆಳವಂಕಿ ಜಿಪಂ ವ್ಯಾಪ್ತಿಯ ಮೆಳವಂಕಿ, ಉದಗಟ್ಟಿ, ತಪಸಿ, ಬೆಟಗೇರಿ ಹಾಗೂ ಗೋಸಬಾಳ ಗ್ರಾಮ ಪಂಚಾಯತಿಗಳಿಗೆ ತಲಾ 40 ರಂತೆ 200 ಮನೆಗಳು ಹಾಗೂ ಕೌಜಲಗಿ ಗ್ರಾಮ ಪಂಚಾಯತಿಗೆ 100 ಮನೆಗಳು ಬಸವ ವಸತಿ ಯೋಜನೆಯಡಿ ಮಂಜೂರಾಗಿವೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ವಸತಿ ಸಚಿವ ಎಂ.ಕೃಷ್ಣಪ್ಪ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಅಭಿನಂದಿಸುವುದಾಗಿ ಸಣ್ಣಕ್ಕಿ ಹೇಳಿದರು.
ಇದೇ ಸಂದರ್ಭದಲ್ಲಿ ಮೆಳವಂಕಿ ಗ್ರಾಮ ಪಂಚಾಯತಿಯ 40 ಫಲಾನುಭವಿಗಳಿಗೆ ಮನೆಗಳ ಆದೇಶ ಪತ್ರಗಳನ್ನು ಗಣ್ಯರು ವಿತರಿಸಿದರು.
ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಬಿ.ಡಿ. ಪಾಟೀಲ, ಯುವ ಧುರೀಣರಾದ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ, ಈರಪ್ಪ ಬೀರನಗಡ್ಡಿ, ಮುತ್ತೆಪ್ಪ ಹಡಗಿನಾಳ, ಸಿದ್ದಪ್ಪ ಹಂಜಿ, ಅಲ್ಲಪ್ಪ ಕಂಕಣವಾಡಿ, ಅಡಿವೆಪ್ಪ ಕಂಕಾಳಿ, ಅಡಿವೆಪ್ಪ ಭಂಗಿ, ಈರಣ್ಣಾ ದೇಸಾಯಿ, ಯಲ್ಲಪ್ಪ ಮುರ್ಕಿಬಾವಿ, ಯಲ್ಲಪ್ಪ ಬಿ.ಗೌಡರ, ಮುಂತಾದವರು ಉಪಸ್ಥಿತರಿದ್ದರು.

Related posts: