RNI NO. KARKAN/2006/27779|Thursday, July 31, 2025
You are here: Home » breaking news » ರಾಯಬಾಗ : ಕಾನೂನು ಸೇವೆಗಳ ಪ್ರಾಧಿಕಾರದ ಸದುಪಯೋಗ ಪಡೆದುಕೊಳ್ಳಿ : ನ್ಯಾಯಾಧೀಶ ರಮಾಕಾಂತ ಸಲಹೆ

ರಾಯಬಾಗ : ಕಾನೂನು ಸೇವೆಗಳ ಪ್ರಾಧಿಕಾರದ ಸದುಪಯೋಗ ಪಡೆದುಕೊಳ್ಳಿ : ನ್ಯಾಯಾಧೀಶ ರಮಾಕಾಂತ ಸಲಹೆ 

ಕಾನೂನು ಸೇವೆಗಳ ಪ್ರಾಧಿಕಾರದ ಸದುಪಯೋಗ ಪಡೆದುಕೊಳ್ಳಿ : ನ್ಯಾಯಾಧೀಶ ರಮಾಕಾಂತ ಸಲಹೆ

ರಾಯಬಾಗ ಮೇ 13:ಗ್ರಾಮೀಣ ಪ್ರದೇಶದ ಜನರಿಗೆ ಕಾನೂನಿನ ಅರಿವು ಮೂಡಿಸಿ ನೆರವು ನೀಡುವ ಸಲುವಾಗಿ ಕಾನೂನು ಸೇವೆಗಳ ಪ್ರಾಧಿಕಾರ ಸ್ಥಾಪಿಸಲಾಗಿದ್ದು, ಗ್ರಾಮೀಣ ಭಾಗದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶ ರಮಾಕಾಂತ ಚವ್ಹಾಣ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಯಬಾಗ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾದ್ಯಂತ ಸಂಚರಿಸುತ್ತಿರುವ ಕಾನೂನು ಸಾಕ್ಷರತಾ ರಥ ಯಾತ್ರೆಗೆ ಹಸಿರು ನಿಶಾನೆ ತೋರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಬಾಲ್ಯ ವಿವಾಹ ನಡೆಯುತ್ತಿರುವ ಮಾಹಿತಿ ಸಿಕ್ಕಲ್ಲಿ ಬಾಲ್ಯ ವಿವಾಹ ನಿಷೇಧ ಅಧಿಕಾರಿ, ಪೊಲೀಸ್ ಠಾಣೆ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದೂರು ಸಲ್ಲಿಸಲು ತಿಳಿಸಿದರು. ಕಾನೂನು ಸಾಕ್ಷರತಾ ರಥ ತಾಲೂಕಿನ ನಿಡಗುಂದಿ ಮತ್ತು ಬಸ್ತವಾಡ ಗ್ರಾಮದಲ್ಲಿ ಸಂಚರಿಸಿ ಬಾಲ್ಯ ವಿವಾಹ ಜಾಗೃತಿ ಕುರಿತು ಕಾನೂನಿನ ತಿಳುವಳಿಕೆ ನೀಡಲಿದೆ ಎಂದರು. 
ಹೆಚ್ಚುವರಿ ಜೆ.ಎಮ್.ಎಫ್.ಸಿ ನ್ಯಾಯಾಧೀಶ ರಾಘವೇಂದ್ರ ವೈಜನಾಥ, ಸ.ಸ.ಅಭಿಯೋಜಕ  ಎಮ್.ಪಿ.ಗಾಂವ್ಕರ್, ಸಿಡಿಪಿಓ ಎಸ್.ಎಮ್.ಹಂಜಿ, ಕಾನೂನು ಅಧಿಕಾರಿ ವೈಜುಷಾ ಅಡಕೆ, ವಕೀಲರ ಸಂಘದ ಅಧ್ಯಕ್ಷ ಬಿ.ಆರ್.ಪಡಲಾಳೆ, ಉಪಾಧ್ಯಕ್ಷ ಆರ್.ಎಸ್.ಕಳ್ಳಿಗುದ್ದಿ, ಸಹ ಕಾರ್ಯದರ್ಶಿ ಎಸ್.ಪಿ.ಕಾಂಬಳೆ, ವಕೀಲರಾದ ಬಿ.ಬಿ.ಈಟಿ, ಜಿ.ಎಸ್.ಪವಾರ, ಕೆ.ಎಮ್.ಮಡಿವಾಳ, ಎನ್.ಎಸ್.ಒಡೆಯರ, ವ್ಹಿ.ಪಿ.ಮಿರ್ಜೆ, ಆಯ್.ಎನ್.ಕೋಷ್ಠಿ, ಆರ್.ಎ.ಗೆನ್ನವ್ವರ, ಆರ್.ಎಲ್.ಪಾಟೀಲ, ಎಸ್.ಎಮ್.ಕಳ್ಳೆ, ಎಸ್.ಬಿ.ಗಸ್ತಿ, ಶಿರಸ್ತೆದಾರ ಪಿ.ಆಯ್.ವಾಘಮೊರೆ ಹಾಗೂ ನ್ಯಾಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ : ರಂಜೀತ ಕಾಂಬಳೆ

Related posts: