ಘಟಪ್ರಭಾ:ಪೆಟ್ರೋಲ್ ಪಂಪನ ಶೌಚಾಲಯಗಳು ಸಾರ್ವಜನಿಕರ ಬಳಕೆಗೆ ಲಭ್ಯ : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸೂಚನೆ
ಪೆಟ್ರೋಲ್ ಪಂಪನ ಶೌಚಾಲಯಗಳು ಸಾರ್ವಜನಿಕರ ಬಳಕೆಗೆ ಲಭ್ಯ : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸೂಚನೆ
ಘಟಪ್ರಭಾ ಜ 7 : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಸ್ವಚ್ಛ ಭಾರತ ಮಿಷನ ಅಡಿಯಲ್ಲಿ ದೇಶವನ್ನು ಬಯಲುಶೌಚ ಮುಕ್ತನ್ನಾಗಿಸುವ ಗುರಿ ಹೊಂದಿದ್ದು, ಈ ನಿಟ್ಟನಲ್ಲಿ ಸಾರ್ವಜನಿಕರ ಬಳಕೆಗಾಗಿ ಅಗತ್ಯಕ್ಕೆ ತಕ್ಕಂತೆ ವ್ಯಯಕ್ತಿಕ ಮತ್ತು ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಸ್ವಚ್ಛ ಸರ್ವೇಕ್ಷಣ-2018ರ ಕೈಪಿಡಿಯಲ್ಲಿ ನೀಡಿದ ಮಾರ್ಗ ಸೂಚಿಯಂತೆ ಎಲ್ಲ ಪೆಟ್ರೋಲ್ ಪಂಪನಲ್ಲಿರುವ ಶೌಚಾಲಯಗಳನ್ನು ಸಾರ್ವಜನಿಕರ ಬಳಕೆಗೆ ಲಭ್ಯವಾಗುವಂತೆ ಅಧಿಸೂಚನೆ ಹೊರಡಿಸಲು ನಿರ್ದೇಶಿಸಲಾಗಿದ್ದು ಅದರ ಪ್ರಯುಕ್ತ ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕಾಯಿಪಲ್ಲೇ ಮಾರ್ಕೇಟ ಹತ್ತಿರ ಪರಮೇಶ್ವರಿ ಪೆಟ್ರೋಲಿಯಮ್ ಆಯ್.ಓ.ಸಿ ಪೆಟ್ರೋಲ ಪಂಪ ಆವರಣದಲ್ಲಿ ಶೌಚಾಲಯಗಳನ್ನು ಸಾರ್ವಜನಿಕರು ಬಳಿಸಬೇಕೆಂದು ಮುಖ್ಯಾಧಿಕಾರಿ ಕೆ.ಬಿ. ಪಾಟೀಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ