ಘಟಪ್ರಭಾ:ಗ್ರಾಮೀಣ ಪ್ರದೇಶದ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತಾಗಬೇಕು : ಮಾಜಿ ಸಚಿವ ಬಾಲಚಂದ್ರ
ಗ್ರಾಮೀಣ ಪ್ರದೇಶದ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತಾಗಬೇಕು : ಮಾಜಿ ಸಚಿವ ಬಾಲಚಂದ್ರ
ಘಟಪ್ರಭಾ ಜ 5: ಬಬಲಾದಿ ಮಠದ ಯಾತ್ರಾ ಮಹೋತ್ಸವ ನಿಮಿತ್ಯ ಗುರುವಾರದಂದು ರಾತ್ರಿ ಅಂತರರಾಜ್ಯ ಮಟ್ಟದ ಜಂಗೀ ನಿಕಾಲಿ ಕುಸ್ತಿಗಳ ಪ್ರದರ್ಶನ ಭಾರೀ ಜನಸಾಗರದ ಮಧ್ಯ ಜರುಗಿತು.
ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರು ಜಂಗೀ ನಿಕಾಲಿ ಕುಸ್ತಿಗಳ ಪಂದ್ಯಕ್ಕೆ ಚಾಲನೆಗೊಳಿಸಿದರು.
ಅಂತರರಾಜ್ಯ ಮಟ್ಟದ ಕುಸ್ತಿ ಫೈಲವಾನ್‍ಗಳು ಇದರಲ್ಲಿ ಭಾಗಿಯಾಗಿ ಪ್ರದರ್ಶನ ನೀಡಿದರು. ಅರಭಾವಿ-ಶಿಂಧಿಕುರಬೇಟ ಗ್ರಾಮಗಳ ಸುತ್ತಮುತ್ತಲಿನ ಕ್ರೀಡಾಪ್ರೇಮಿಗಳು ಕುಸ್ತಿ ಪಂದ್ಯಾಟವನ್ನು ವೀಕ್ಷಿಸಿದರು.

ಅಂತರರಾಜ್ಯ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಯನ್ನು ಮಾಜಿ ಸಚಿವರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ಅಪ್ಪು ಪಟ್ಟಣಶೆಟ್ಟಿ ವೀಕ್ಷಿಸುತ್ತಿರುವುದು
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಪಾಶ್ಚಾತ್ಯ ಸಂಸ್ಕಂತಿಯ ಕ್ರೀಡೆಗಳಿಗೆ ಮಾರುಹೋಗದೇ ದೇಶಿಯ ಕ್ರೀಡೆಗಳನ್ನು ಉಳಿಸಬೇಕಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತಾಗಬೇಕು. ಕಬಡ್ಡಿ, ಖೋ-ಖೋ, ಕುಸ್ತಿ, ಸೇರಿದಂತೆ ಹಲವು ದೇಶಿಯ ಆಟಗಳು ಇದ್ದು ಇವುಗಳನ್ನು ಬೆಳೆಸಿ ಪೋಷಿಸಬೇಕಾಗಿದೆ ಎಂದು ಹೇಳಿದರು.
ಶ್ರೀಕ್ಷೇತ್ರ ಬಬಲಾದಿ ಮಠವು ತನ್ನದೇಯಾದ ಅಪಾರ ಭಕ್ತರನ್ನು ಹೊಂದಿ ಈ ಭಾಗದಲ್ಲಿ ಪುಣ್ಯಕ್ಷೇತ್ರವಾಗಿ ಬೆಳೆದಿದೆ. ಬಬಲಾದಿ ಮಠದ ಸ್ವಾಮೀಜಿಗಳ ಪವಾಡಗಳು ಕೂಡ ಅಪಾರವಾಗಿವೆ. ಸಮಾಜವನ್ನು ತಿದ್ದುವಲ್ಲಿಯೂ ಸತ್ಪುರುಷರ ಮಾರ್ಗದರ್ಶನ ಅಗತ್ಯವಾಗಿದೆ. ಜಾತ್ರೆ ನಿಮಿತ್ಯ ಬಬಲಾದಿ ಮಠದಲ್ಲಿ ಜರುಗುತ್ತಿರುವ ಕುಸ್ತಿ ಪ್ರದರ್ಶನ ನೆರೆಯ ಗ್ರಾಮಗಳ ಕ್ರೀಡಾಳುಗಳನ್ನು ಆಕರ್ಷಿಸಿದೆ. ಸಾವಿರಾರು ಸಂಖ್ಯೆಯಲ್ಲಿ ಈ ಕುಸ್ತಿ ಪಂದ್ಯಾಟವನ್ನು ವೀಕ್ಷಿಸಲು ರಾಜ್ಯವಲ್ಲದೇ ನೆರೆಯ ರಾಜ್ಯಗಳ ಕ್ರೀಡಾ ಪ್ರೇಮಿಗಳು ಬರುತ್ತಿರುವುದು ಇದರ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಅಂತರರಾಜ್ಯ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಯನ್ನು ಮಾಜಿ ಸಚಿವರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ಅಪ್ಪು ಪಟ್ಟಣಶೆಟ್ಟಿ ವೀಕ್ಷಿಸುತ್ತಿರುವುದು
ಬಬಲಾದಿ ಮಠದ ವೇದಮೂರ್ತಿ ಶಿವಯ್ಯಾ ಮಹಾಸ್ವಾಮಿಗಳ ನೇತೃತ್ವದಲ್ಲಿ ಜಂಗೀ ನಿಕಾಲಿ ಕುಸ್ತಿಗಳ ಪಂದ್ಯಾಟ ಅದ್ದೂರಿಯಾಗಿ ನಡೆಯಿತು.
ಹರಿಯಾಣದ ಕುಲದೀಪ, ಪುಣೆಯ ವಿಷ್ಣು ಕೋಶೆ, ಬೆಳಗಾವಿಯ ಅಪ್ಪಾಸಾಬ ಮುಲ್ತಾನಿ, ಹಾರೂಗೇರಿಯ ಸತ್ಪಾಲ ಪೂಜೇರಿ, ಕೊಲ್ಹಾಪೂರದ ಶಿವಾನಂದ ನಿರ್ವಾಣಟ್ಟಿ, ಹುನ್ನೂರಿನ ಶಿವಯ್ಯಾ ಪೂಜೇರಿ, ಸಂಗಮೇಶ ಬಿರಾದಾರ, ಹರಿಯಾಣದ ವಿಶಾಲ ಸೇರಿದಂತೆ ಅನೇಕ ಕುಸ್ತಿ ಪಟುಗಳು ಈ ಪಂದ್ಯಾಟದಲ್ಲಿ ಪಾಲ್ಗೊಂಡು ನೆರೆದ ಕ್ರೀಡಾ ಪ್ರೇಮಿಗಳನ್ನು ಆಕರ್ಷಿಸಿದರು.
ಅಂತರಾಷ್ಟ್ರೀಯ ಕುಸ್ತಿಪಟು ರತ್ನಕುಮಾರ ಅಡಾಲಟ್ಟಿ, ಸುಭಾಶ ಹುಕ್ಕೇರಿ, ಹನಮಂತ ದೋತ್ರೆ, ರಾಮಣ್ಣಾ ಹುಕ್ಕೇರಿ, ಸಾತಪ್ಪ ಜೈನ್, ಶಂಕರ ಬಿಲಕುಂದಿ, ಬಿ.ವಾಯ್.ಹಳ್ಳೂರ, ಹೊನ್ನಜ್ಜ ಕೋಳಿ, ನಿಂಗಪ್ಪ ಇಳಿಗೇರ, ತಮ್ಮಣ್ಣಾ ಜಮಖಂಡಿ, ಲಕ್ಷ್ಮಣ ತೆಳಗಡೆ, ಕೆಂಚಪ್ಪ ಭರಮನ್ನವರ, ಜ್ಯೋತೆಪ್ಪ ಬಂತಿ, ಕೆಂಪಣ್ಣ ಕಡಲಗಿ, ಅಶೋಕ ಖಂಡ್ರಟ್ಟಿ, ಗೋವಿಂದ ಗಾಡಿವಡ್ಡರ, ನಾರಾಯಣ ಕೋಳಿ, ಬಾಳಪ್ಪ ಮಾಯಪ್ಪಗೋಳ, ವಿಠ್ಠಲ ಹೊನಕುಪ್ಪಿ, ಗೋವಿಂದ ಪಾಟೀಲ, ಸಿದ್ದಲಿಂಗ ವಡೇರ, ಮಹೇಶ ನಂದಿಮಠ, ಅಡಿವೆಪ್ಪ ಕಟ್ಟಿಮನಿ, ಕೆ.ವಾಯ್.ಕುಳ್ಳೂರ, ಮಾರುತಿ ಸಿರಗುರಿ, ಶಿವಾನಂದ ಕೊಂಕಣಿ ಸುತ್ತಮುತ್ತಲಿನ ಅನೇಕ ಮುಖಂಡರು ಉಪಸ್ಥಿತರಿದ್ದರು.