RNI NO. KARKAN/2006/27779|Saturday, August 2, 2025
You are here: Home » breaking news » ಖಾನಾಪುರ:ಧರ್ಮ ಒಂದೇ, ಅದುವೇ ಮಾನವ ಧರ್ಮ : ಡಾ-ಮಹರ್ಷಿ ಆನಂದ ಗುರೂಜಿ

ಖಾನಾಪುರ:ಧರ್ಮ ಒಂದೇ, ಅದುವೇ ಮಾನವ ಧರ್ಮ : ಡಾ-ಮಹರ್ಷಿ ಆನಂದ ಗುರೂಜಿ 

ಧರ್ಮ ಒಂದೇ, ಅದುವೇ ಮಾನವ ಧರ್ಮ : ಡಾ-ಮಹರ್ಷಿ ಆನಂದ ಗುರೂಜಿ

ಖಾನಾಪುರ ಡಿ 31 : ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಹಾಗೇ ಉತ್ತರ ಕರ್ನಾಟಕದ ಗಡಿಭಾಗದ ಖಾನಾಪುರ ತಾಲೂಕಿನ ಸರ್ವಧರ್ಮದ ಜನರು ಏಕತೆಯಿಂದ ಧರ್ಮವನ್ನು ಪೂಜಿಸುವ ಕಾರ್ಯ ಜನತೆಯಲ್ಲಿದೆ. ಅದಕ್ಕಾಗಿ ಧರ್ಮ ಒಂದೇ, ಅದುವೇ ಮಾನವ ಧರ್ಮ ಎಂದು ಹೇಳಲಾಗುತ್ತಿದೆ ಎಂದು ಜೀ ಟಿವಿ ಖ್ಯಾತಿಯ ಪೂಜ್ಯ ಶ್ರೀ ಬ್ರಹ್ಮರ್ಷಿ ಡಾ-ಮಹರ್ಷಿ ಆನಂದ ಗುರೂಜಿ ಹೇಳಿದರು.

ತಾಲೂಕಿನ ಹಿರೇಮುನವಳ್ಳಿ ಗ್ರಾಮದಲ್ಲಿ ಶನಿವಾರ ದಿನದಂದು ಹಮ್ಮಿಕೊಂಡಂತಹ ಶ್ರೀ ಸಿದ್ಧ ಶಿವಯೋಗಿ ಶಾಂಡಿಲೇಶ್ವರಮಠದ 21ನೆಯ ವರ್ಷದ ಜಾತ್ರಾಮಹೋತ್ಸವದ ಸದ್ಧರ್ಮ ಸಭೆಯ ಸಮ್ಮುಖ ವಹಿಸಿ ಮಾತನಾಡಿದರು.

ನಾನು ಅನೇಕ ಕಡೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನೋಡಿದೆ ಆದರೆ ಇಲ್ಲಿಯ ಮುಸ್ಲಿಂ ಸಮಾಜದ ಮಹಿಳೆಯರು, ಯುವಕರು ಮತ್ತು ಸರ್ವಧರ್ಮದ ಜನತೆ ನನ್ನನ್ನು ನಮಸ್ಕರಿಸಿ, ಸ್ವಾಗತಿಸುತ್ತಿರುವುದು ನೋಡಿದರೆ ನಿಜಕ್ಕೂ ಧರ್ಮ ಒಂದೇ, ಅದುವೇ ಮಾನವ ಧರ್ಮ ಎಂದು ಹೇಳಬಹುದು. ಈ ಭಾಗದಲ್ಲಿ ಯಾವುದೇ ಧರ್ಮದ ಕಾರ್ಯಕ್ರಮಗಳು ನಡೆದರೆ, ಸರ್ವಧರ್ಮಿಯರು ಒಗ್ಗಟ್ಟಾಗಿ ಧಾರ್ಮಿಕ ಕಾರ್ಯವನ್ನು ಮಾಡುತ್ತಾರೆಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೊಡುಗೈದಾನಿ ನಾಸೀರ ಅಣ್ಣಾ ಬಾಗವಾನ ಅವರು, ಈ ಭೂಮಿಯ ಮೇಲೆ ಜೀವಿಸುತ್ತಿರುವ ನಾವೆಲ್ಲರೂ ಒಂದೇ, ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವುದರಿಂದ ಮನಸ್ಸಿಗೆ ಶಾಂತಿ-ನೆಮ್ಮದಿ ಸಿಗುದಷ್ಟೆ ಅಲ್ಲದೆ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಜಗತ್ತಿಗೆ ಸಂದೇಶ ಸಾರಬಹುದೆಂದೆರು.

ಇದಕ್ಕೂ ಮೊದಲು ಜೀ ಟಿವಿ ಖ್ಯಾತಿಯ ಪೂಜ್ಯ ಶ್ರೀ ಬ್ರಹ್ಮರ್ಷಿ ಡಾ-ಮಹರ್ಷಿ ಆನಂದ ಗುರೂಜಿ ಯವರನ್ನು ಸಾರೋಟದಲ್ಲಿ ಕೂರಿಸಿ ಕೊಡುಗೈದಾನಿಯ ಸುಪುತ್ರ ರಮೀಜ ಬಾಗವಾನ ಅವರ ನೇತೃತ್ವದಲ್ಲಿ 108 ಬೈಕಗಳಲ್ಲಿ ಗ್ರಾಮದ ಯುವಕರೆಲ್ಲರೂ ಸೇರಿಕೊಂಡು ಪ್ರಮುಖ ಬೀದಿ-ಬೀದಿಗಳಲ್ಲಿ ಬೈಕ ರ್ಯಾಲಿಯ ಮುಖಾಂತರ ಸಂಚರಿಸಿ ವೇದಿಕೆಗೆ ಕರೆತಂದರು.

ಈ ಕಾರ್ಯಕ್ರಮದಲ್ಲಿ ಶತಾಯುಷಿಗಳಾದ ತಾಯವ್ವ ಪಾಟೀಲ, ಯಶೋದಾಬಾಯಿ ಪತ್ತಾರ, ಕಾಶಮ್ಮ ಪೂಜಾರ, ಮಲ್ಲಮ್ಮ ಗೌಡತಿ ಮತ್ತು ಪಾರ್ವತೆವ್ವ ಕೇರಿಮಠ ರವರಿಗೆ ಶ್ರೀ ಶಾಂಭವಿದೇವಿ ಮಹಾಮಾತಾ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.

ಈ ಕಾರ್ಯಕ್ರಮದ ಸಾನಿಧ್ಯ ವನ್ನು ಮುಗೋಡದ ನೀಲಕಂಠ ಮಹಾಸ್ವಾಮಿಗಳು ವಹಿಸಿದ್ದರು. ನೇತೃತ್ವವವನ್ನು ಶ್ರಿ ಸಿದ್ಧಶಿವಯೋಗಿ ಶಾಂಟಿಲೇಶ್ವರ ಮಠದ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ವೇದಿಕೆಯಲ್ಲಿ ಯೋಗಾಶ್ರಮದ ಚನ್ನಮಲ್ಲೆಶ್ವರ ಮಹಾಸ್ವಾಮಿಗಳು, ಬಿಳಕಿಯ ಚನ್ನಬಸವದೇವರು, ಗಂದಿಗವಾಡದ ಮೃತ್ಯಂಜಯಸ್ವಾಮಿಗಳು ಹಿರೇಮಠ, ಹಿರೇಮುನವಳ್ಳಿಯ ಶಾಂಭವಿದೇವಿ, ಬಿಜೆಪಿ ಮುಖಂಡರಾದ ಸುಭಾಷ ಗೊಳಶೆಟ್ಟಿ, ಪ್ರಮೋದ ಕೋಚೆರಿ, ಹಿರಿಯರಾದ ಶಂಕರ ಹೂಳಿ, ಶಶಿಧರ ಇನಾಮದಾರ ಗ್ರಾಮದ ಮುಖಂಡರು ಹಾಜರಿದ್ದರು

Related posts: