RNI NO. KARKAN/2006/27779|Thursday, January 15, 2026
You are here: Home » breaking news » ಗೋಕಾಕ:ದೇಶಕ್ಕೆ ಅನ್ನ ನೀಡುವ ರೈತನಿಗೆ ಸರ್ಕಾರ ಗೌರವ ನೀಡಿ: ಮಂಜುನಾಥ ಪೂಜೇರಿ

ಗೋಕಾಕ:ದೇಶಕ್ಕೆ ಅನ್ನ ನೀಡುವ ರೈತನಿಗೆ ಸರ್ಕಾರ ಗೌರವ ನೀಡಿ: ಮಂಜುನಾಥ ಪೂಜೇರಿ 

ದೇಶಕ್ಕೆ ಅನ್ನ ನೀಡುವ ರೈತನಿಗೆ ಸರ್ಕಾರ ಗೌರವ ನೀಡಿ: ಮಂಜುನಾಥ ಪೂಜೇರಿ

ಗೋಕಾಕ ಡಿ 23: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಘಟಕದ ವತಿಯಿಂದ ಶನಿವಾರದಂದು ನಗರದ ಜ್ಞಾನ ಮಂದಿರದಲ್ಲಿ ರೈತ ದಿನಾಚರಣೆಯನ್ನು ಕೃಷಿಋಷಿ ದಿ. ಪ್ರೋ ನಂಜುಂಡಸ್ವಾಮಿ ಅವರ ಭಾವಚಿತ್ರಕ್ಕೆ ಪೂಜೆಯನ್ನು ತಾಲೂಕಾಧ್ಯಕ್ಷ ಮುತ್ತೆಪ್ಪ ಬಾಗನ್ನವರ ಅವರು ನೆರವೇರಿಸುವ ಮೂಲಕ ಚಾಲನೆ ನೀಡಿದರು.
ರೈತ ಸಂಘದ ತಾಲೂಕಾ ಕಾರ್ಯಾಧ್ಯಕ್ಷ ಮಂಜುನಾಥ ಪೂಜೇರಿ ಅವರು ಮಾತನಾಡಿ, ರೈತರ ಸಮಸ್ಯೆಗಳನ್ನು ಸರ್ಕಾರಗಳು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳದೇ ನ್ಯಾಯಯುತವಾಗಿ ಬಗೆ ಹರಿಸಬೇಕೆಂದು ಹೇಳಿದರಲ್ಲದೇ ದೇಶಕ್ಕೆ ಅನ್ನ ನೀಡುವ ರೈತನಿಗೆ ಸರ್ಕಾರ ಗೌರವ ನೀಡುವ ನಿಟ್ಟಿನಲ್ಲಿ ಸರ್ಕಾರಿಯ ಎಲ್ಲ ಇಲಾಖೆಯ ಕಾರ್ಯಾಲಯಗಳಲ್ಲಿ ರೈತ ದಿನಾಚರಣೆ ಆಚರಿಸುವಂತೆ ಆದೇಶ ಹೊರಡಿಸಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಸಿದ್ರಾಮ ಪೂಜೇರಿ, ಯಲ್ಲಪ್ಪ ತಿಗಡಿ, ಪ್ರದೀಪ ಪೂಜೇರಿ, ಪುಂಡಲೀಕ ನಿಡಸೋಸಿ, ಸಿದ್ಲಿಂಗ ಪೂಜೇರಿ, ಶಿವಪುತ್ರ ಪತ್ತಾರ, ಗೋಪಾಲ, ಕುಕನೂರ, ಮುತ್ತೆಪ್ಪ ಕುರುಬರ, ಪ್ರಕಾಶ ಹಾಲನ್ನವರ, ಮುಬಾರಕ ಜಮಾದಾರ, ವಿಜಯ ಕೋಳಿ, ಸಿದ್ದಪ್ಪ ತಪಶಿ, ಮಲಕಾಜ ಬಾಗನ್ನವರ, ಬರಮು ಕೆಮಲಾಪೂರೆ ಸೇರಿದಂತೆ ಅನೇಕರು ಇದ್ದರು.

Related posts: