RNI NO. KARKAN/2006/27779|Wednesday, October 15, 2025
You are here: Home » breaking news » ಘಟಪ್ರಭಾ:ಕಾಂಗ್ರೇಸ್ ಪಕ್ಷ ಬಡವರ ದೀನ ದಲಿತರ ಪಕ್ಷವಾಗಿದೆ : ಪಿ.ವ್ಹಿ.ಮೋಹನ

ಘಟಪ್ರಭಾ:ಕಾಂಗ್ರೇಸ್ ಪಕ್ಷ ಬಡವರ ದೀನ ದಲಿತರ ಪಕ್ಷವಾಗಿದೆ : ಪಿ.ವ್ಹಿ.ಮೋಹನ 

ಕಾಂಗ್ರೇಸ್ ಪಕ್ಷ ಬಡವರ ದೀನ ದಲಿತರ ಪಕ್ಷವಾಗಿದೆ : ಪಿ.ವ್ಹಿ.ಮೋಹನ

ಘಟಪ್ರಭಾ ಡಿ 3: ಕಾಂಗ್ರೇಸ್ ಪಕ್ಷ ಬಡವರ ದೀನ ದಲಿತರ ಪಕ್ಷವಾಗಿದೆ. ಕಾರ್ಯಕರ್ತರೇ ನಮ್ಮ ಪಕ್ಷದ ಪ್ರಮುಖ ಆಸ್ತಿ ಎಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿಗಳಾದ ಪಿ.ವ್ಹಿ.ಮೋಹನ ಹೇಳಿದರು.

ಅವರು ರವಿವಾರದಂದು ಸಮೀಪದ ತುಕ್ಕಾನಟ್ಟಿ ಗ್ರಾಮದಲ್ಲಿ ಆಯೋಜಿಸಲಾದ ಅರಭಾಂವಿ ಬ್ಲಾಕ್ ಕಾಂಗ್ರೇಸ್ ಕಾರ್ಯಕರ್ತರ ಪ್ರಗತಿ ಪರೀಶಿಲನೆ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತ, ರಾಜ್ಯದ ಕಾಂಗ್ರೇಸ್ ಸರ್ಕಾರ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವುಗಳನ್ನು ಕಾರ್ಯಕರ್ತರು ಮನೆ ಮನೆಗೆ ತೆರಳಿ ಕಾಂಗ್ರೇಸ್ ಸಾಧನೆಗಳನ್ನು ಮತದಾರರಿಗೆ ಮುಟ್ಟಿಸಿ ಜಿಲ್ಲೆಯ 18 ವಿಧಾನ ಸ್ಥಾನಗಳನ್ನು ಪಕ್ಷ ಗೆಲ್ಲುವಂತೆ ಕಾರ್ಯ ಮಾಡಬೇಕೆಂದು ಮನವಿ ಮಾಡಿದರು.

ರಾಜ್ಯದ ಜನರು ಬಿಜೆಪಿ ಪಕ್ಷಕ್ಕೆ ಬೇಸತ್ತು ಕಾಂಗ್ರೇಸಕ್ಕೆ ಮತ ನೀಡಿದ್ದಾರೆ. ಯಡಿಯೂರಪ್ಪನವರು ಬೆಳಗಾವಿ ಜಿಲ್ಲೆಯ ಯಾವುದೇ ಕ್ಷೇತ್ರದಿಂದ ಸ್ಪರ್ದಿಸಿದರೂ ಅವರನ್ನು ಸೋಲಿಸಲು ಕಾಂಗ್ರೇಸ್ ಕಾರ್ಯಕರ್ತರು ಸಿದ್ದರಾಗಿದ್ದಾರೆ. ಈಗಿರುವ ಶಾಸಕರು ತಮ್ಮ ಕ್ಷೇತ್ರಕ್ಕೆ ಯಾವ ಸುಧಾರಣೆಗಳನ್ನು ಮಾಡಿದ್ದಾರೆ ಎಂಬುದನ್ನು ಅವಲೋಕಿಸಿ ಮುಂಬರುವ ವಿಧಾನ ಸಭಾ ಚುನಾವಣÉಯಲ್ಲಿ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಬೇಕೆಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಂಗ್ರೇಸ್ ಪಕ್ಷದ ಬೆಳಗಾವಿ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ ಚುನಾವಣೆಯ ಪ್ರನಾಳಿಕೆಯಲ್ಲಿ ನೀಡಿದಂತಹ ಎಲ್ಲ ಆಶ್ವಾಸನೆಗಳನ್ನು ಸಂಪೂರ್ಣವಾಗಿ ಈಡೇರಿಸಿದ ಕೀರ್ತಿ ರಾಜ್ಯದ ಕಾಂಗ್ರೇಸ ಸರ್ಕಾರಕ್ಕೆ ಸಲ್ಲುತದೆ. ಕಾರ್ಯಕರ್ತರು ಪಕ್ಷ ಬಲವರ್ಧನೆಗೆ ಮುಂದಾಗಿ ಮುಂದಿನ ಚುನಾವಣÉಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರಭಾಂವಿ ಬ್ಲಾಕ್ ಅಧ್ಯಕ್ಷ ಭರಮಣ್ಣಾ ಉಪ್ಪಾರ ಮಾತನಾಡಿ, ಮನೆ ಮೆನೆಗೆ ಕಾಂಗ್ರೇಸ್ ಪ್ರಚಾರ ಕಾರ್ಯಕ್ರಮದ ಮೂಲಕ 200 ಕ್ಕೂ ಹೆಚ್ಚು ಬೂತಗಳಲ್ಲಿ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಹೊರಗಿನವರಿಗೆ ಅವಕಾಶ ನೀಡದೇ ಅರಭಾಂವಿ ಕ್ಷೇತ್ರ ಹಾಗೂ ಪಕ್ಷದ ಅಭಿವೃದ್ಧಿಗೆ ಶ್ರಮಿಸಿದ ಕಾರ್ಯಕರ್ತರನ್ನು ಗುರುತಿಸಿ ಟಿಕಿಟ್ ನೀಡಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಪ್ರಗತಿಪರ ರೈತ ರಾಮು ಉಪ್ಪಾರ ಅವರಿಗೆ ಸತ್ಕರಿಸಲಾಯಿತು. ವೇದಿಕೆ ಮೇಲೆ ಪಕ್ಷದ ಮುಖಂಡರಾದ ರಮೇಶ ಗಡಗಿ, ರಾಜಾಸಲಿಂ ಕಾಶಿಮನವರ, ಅಡಿವೆಪ್ಪಾ ಸಂಕಾಳಿ, ಸುನೀಲ ಎತ್ತಿನಮನಿ, ಮಲ್ಲಿಕಾರ್ಜುನ ಕಬ್ಬೂರ, ಶಂಕರ ಗೋಟೂರ, ಮಹಾಂತೇಶ ಮೆಳವಂಕಿ, ಭೀಮಶಿ ಕಾರದಗಿ, ಬಸವರಾಜ ತುಂಬುಚಿ, ಸತ್ಯಪ್ಪಾ ಬಬಲಿ, ಸುರೇಶ ಮಗದುಮ್, ಮರೆಪ್ಪಾ ಮರೆಪ್ಪಗೋಳ, ಸುರೇಶ ಗೊಂದಿ, ಸೇರಿದಂತೆ ಕಾರ್ಯಕರ್ತರು ಇದ್ದರು.
ಶೈಲಜಾ ಕೊಕ್ಕರಿ ನಿರೂಪಿಸಿದರು. ಕಲ್ಲಪ್ಪಗೌಡಾ ಲಕ್ಕಾರ ಸ್ವಾಗತಿಸಿದರು. ಸಿದ್ದಪ್ಪಾ ಮುಂಡಿಗನಾಳ ವಂದಿಸಿದರು.

Related posts: